ಟೇಕಾಫ್ ಗೆ ಮೀಸಲಿಟ್ಟ ರನ್ ವೇಗೆ ಬಂದಿಳಿದ ಅಪ್ಘಾನ್ ವಿಮಾನ: ಸ್ವಲ್ಪದರಲ್ಲಿ ತಪ್ಪಿದ ಅನಾಹುತ

ನವದೆಹಲಿ: ಟೇಕಾಫ್ ಗೆ ಮೀಸಲಿಟ್ಟ ರನ್ ವೇ ಗೆ ಅಪ್ಘಾನ್ ವಿಮಾನವೊಂದು ಬಂದಿಳಿದ ಘಟನೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಕಾಬೂಲ್ ನಿಂದ ಬಂದ FG 311 ವಿಮಾನ ಭಾನುವಾರ ಮಧ್ಯಾಹ್ನ 12:7ಕ್ಕೆ ರನ್ ವೇ 29R ನಲ್ಲಿ ಬಂದು ಲ್ಯಾಂಡ್ ಆಗಿದೆ. ಆ ಸಮಯದಲ್ಲಿ ಬೇರೆ ಯಾವುದೇ ವಿಮಾನ ಟೇಕಾಫ್ ಆಗುವುದು ಇರಲಿಲ್ಲವಾದ್ದರಿಂದ ಸ್ವಲ್ಪದಲ್ಲಿ ಭಾರಿ ಅನಾಹುತ ತಪ್ಪಿದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಫ್ಘಾನ್ ಜೆಟ್ ವಿಮಾನ ರನ್ ವೇನಲ್ಲಿ ತಪ್ಪಾಗಿ ಇಳಿದಿದೆಯೇ? ಅಥವಾ ವಾಯು ಸಂಚಾರ ನಿಯಂತ್ರಕರ ಸೂಚನೆ ಮೇರೆಗೆ ಲ್ಯಾಂಡ್ ಮಾಡಲಾಗಿತ್ತೇ? ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read