ದೆಹಲಿಯ ಕೃಷ್ಣಾ ನಗರದಲ್ಲಿ ಬುಧವಾರ ಎಸಿ ಕಂಪ್ರೆಸರ್ ಸ್ಫೋಟಗೊಂಡ ಪರಿಣಾಮ ರಿಪೇರಿ ಅಂಗಡಿ ನೌಕರ ಸಾವನ್ನಪ್ಪಿದ್ದಾರೆ.
ಕೃಷ್ಣಾ ನಗರದ ಎಸಿ ರಿಪೇರಿ ಅಂಗಡಿಯಲ್ಲಿ ದುರಂತ ಸಂಭವಿಸಿದೆ. ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೋಹನ್ ಲಾಲ್ ಎಂಬುವವರು ಸ್ಫೋಟದಲ್ಲಿ ಮೃತಪಟ್ಟಿದ್ದಾರೆ.
ಸ್ಫೋಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ನಡೆದಾಗ ಬೈಕ್ ಸವಾರನೊಬ್ಬ ಅಂಗಡಿಯ ಹೊರಗೆ ಕುಳಿತಿದ್ದ. ಸ್ಫೋಟದ ತೀವ್ರತೆಗೆ ಆತ ಸ್ಥಳದಿಂದ ಓಡಿ ಹೋಗಿದ್ದಾನೆ. ಸ್ಫೋಟದ ತೀವ್ರತೆಗೆ ಮೋಹನ್ ಲಾಲ್ ನೆಲಕ್ಕೆ ಬಿದ್ದಿದ್ದು, ತೀವ್ರ ಗಾಯಗಳಾಗಿವೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
देखिए दर्दनाक CCTV…. AC का कंप्रेशन फटने से एक शख्स की हुई मौत
कृष्णा नगर इलाके में AC की एक दुकान में काम करने वाले मनोहर लाल की AC का कंप्रेशर फटने से मौत हो गई,Ac का काम करते हुए घटना हुई pic.twitter.com/UfFaFezuHC
— Lavely Bakshi (@lavelybakshi) March 13, 2025