ಈ ವಿಟಮಿನ್‌ಗಳ ಕೊರತೆಯಿಂದ ಕಾಣಿಸಿಕೊಳ್ಳುತ್ತೆ ಹಿಮ್ಮಡಿಗಳಲ್ಲಿ ಬಿರುಕು; ಇಲ್ಲಿದೆ ತಕ್ಷಣದ ಪರಿಹಾರ…!

ಹಿಮ್ಮಡಿಗಳಲ್ಲಿ ಒಡಕು ಬಹುತೇಕ ಎಲ್ಲರನ್ನೂ ಕಾಡುವ ಸಮಸ್ಯೆ. ಹಿಮ್ಮಡಿಗಳಲ್ಲಿ ಬಿರುಕು ಕಾಣಿಸಿಕೊಂಡರೆ ಪಾದಗಳ ಸೌಂದರ್ಯ ಸಂಪೂರ್ಣ ಹದಗೆಡುತ್ತದೆ. ಹಿಮ್ಮಡಿ ಗೋಚರಿಸದಂತೆ ಬೂಟುಗಳನ್ನೇ ಧರಿಸಬೇಕಾದ ಅನಿವಾರ್ಯತೆ ಬರುತ್ತದೆ. ಈ ರೀತಿ ಹಿಮ್ಮಡಿಗಳಲ್ಲಿ ಬಿರುಕು ಕಾಣಿಸಿಕೊಳ್ಳಲು ಅನೇಕ ಕಾರಣಗಳಿರುತ್ತವೆ.

ಸಾಮಾನ್ಯವಾಗಿ ಕೆಟ್ಟ ಚರ್ಮ, ಕೊಳಕು, ಚಳಿಗಾಲದಲ್ಲಿ ಚರ್ಮದ ಶುಷ್ಕತೆ ಇವೆಲ್ಲವೂ ಕಾರಣವಾಗುತ್ತವೆ. ಇದಲ್ಲದೆ ವಿಟಮಿನ್ ಕೊರತೆ, ಹಾರ್ಮೋನ್ ಅಸಮತೋಲನ ಹಾಗೂ ದೇಹದ ಪೋಷಣೆ ಕೂಡ ಇದಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಹಿಮ್ಮಡಿ ಒಡಕಿಗೆ ಕಾರಣವಾಗುವ ಜೀವಸತ್ವಗಳು ಯಾವುವು ಎಂಬುದನ್ನು ನೋಡೋಣ.

ಜೀವಸತ್ವಗಳ ಕೊರತೆಯಿಂದಾಗಿ, ಹಿಮ್ಮಡಿಗಳು ಬಿರುಕು ಬಿಡುತ್ತವೆ. ನಮ್ಮ ಪಾದಗಳ ಚರ್ಮವು ಒಣಗಲು ಪ್ರಾರಂಭಿಸಿದಾಗ, ಅದರಲ್ಲಿರುವ ತೇವಾಂಶವು ಕಡಿಮೆಯಾಗಿದೆ ಎಂದರ್ಥ. ಇದರಿಂದಾಗಿ ಚರ್ಮವು ಒರಟು ಮತ್ತು ಪದರಗಳಾಗಿರುತ್ತದೆ. ಒಮ್ಮೊಮ್ಮೆ ಬಿರುಕುಗಳು ಆಳವಾಗಿರುತ್ತವೆ. ಇದು ನಮ್ಮ ಚರ್ಮದ ಒಳ ಪದರಕ್ಕೆ ಹರಡುತ್ತದೆ. ವಿಟಮಿನ್ ಬಿ-3, ವಿಟಮಿನ್ ಸಿ ಮತ್ತು ವಿಟಮಿನ್ ಇ ಕೊರತೆಯಿಂದ ಹಿಮ್ಮಡಿ ಬಿರುಕು ಕಾಣಿಸಿಕೊಳ್ಳುತ್ತದೆ.

ಈ ಎಲ್ಲಾ ಜೀವಸತ್ವಗಳು ಹಿಮ್ಮಡಿಗೆ ಮಾತ್ರವಲ್ಲದೆ ಇಡೀ ದೇಹದ ಚರ್ಮಕ್ಕೂ ಅವಶ್ಯಕ. ಈ ಪೋಷಕಾಂಶಗಳ ಸಹಾಯದಿಂದ ಕಾಲಜನ್ ಉತ್ಪಾದನೆಯು ಹೆಚ್ಚಾಗುತ್ತದೆ ಮತ್ತು ಚರ್ಮವನ್ನು ರಕ್ಷಿಸಲು ಪ್ರಾರಂಭಿಸುತ್ತದೆ. ಆದಾಗ್ಯೂ ಹಿಮ್ಮಡಿಗಳ ಬಿರುಕುಗಳನ್ನು ತಡೆಗಟ್ಟಲು, ಸತು ಸೇರಿದಂತೆ ಖನಿಜ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು.

ಹಾರ್ಮೋನ್ ಅಸಮತೋಲನ ಕೂಡ ಹಿಮ್ಮಡಿ ಬಿರುಕಿಗೆ ಕಾರಣವಾಗಬಹುದು. ಇದರಲ್ಲಿ ಥೈರಾಯ್ಡ್ ಮತ್ತು ಈಸ್ಟ್ರೊಜೆನ್‌ನಂತಹ ಹಾರ್ಮೋನುಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಮಸ್ಯೆ ಹೆಚ್ಚಾದಾಗ ಹಿಮ್ಮಡಿಗಳಲ್ಲಿ ಆಳವಾದ ಬಿರುಕು ಉಂಟಾಗಿ ನಂತರ ನೋವಿನೊಂದಿಗೆ ರಕ್ತವೂ ಹೊರಬರಬಹುದು. ಹಾಗಾಗಿ ವಿಟಮಿನ್‌, ಖನಿಜ ಸಮೃದ್ಧವಾಗಿರುವ ಆಹಾರ ಸೇವಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read