ಯೆಮೆನ್ ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆಗಸ್ಟ್ 14 ಕ್ಕೆ ಮುಂದೂಡಿದೆ.
ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ವಿರುದ್ಧದ ಪ್ರಕರಣವನ್ನು ಕೇಂದ್ರ ಸರ್ಕಾರ “ಉತ್ತಮವಾಗಿ ನೋಡಿಕೊಳ್ಳುತ್ತಿದೆ” ಎಂದು ಭಾರತದ ಸುಪ್ರೀಂ ಕೋರ್ಟ್ ಹೇಳಿದೆ. ಈ ವಾರದ ಆರಂಭದಲ್ಲಿ ಯೆಮೆನ್ ಅಧಿಕಾರಿಗಳು 38 ವರ್ಷದ ಭಾರತೀಯ ಮಹಿಳೆಯ ಮರಣದಂಡನೆಯನ್ನು ಮುಂದೂಡಿದ ನಂತರ ಸುಪ್ರೀಂ ಕೋರ್ಟ್ ಈ ಹೇಳಿಕೆ ನೀಡಿದೆ.
ಶುಕ್ರವಾರದ ವಿಚಾರಣೆಯ ಸಂದರ್ಭದಲ್ಲಿ, ನಿಮಿಷಾ ಪ್ರಿಯಾ ಅವರ ಕುಟುಂಬದ ಪರ ಹಾಜರಿದ್ದ ವಕೀಲರು ಪ್ರಕರಣಕ್ಕಾಗಿ ಯೆಮೆನ್ಗೆ ಪ್ರಯಾಣಿಸಲು ಅನುಮತಿ ಕೋರಿದರು. ಆದರೆ, ಪ್ರಯಾಣ ನಿಷೇಧ ಜಾರಿಯಲ್ಲಿರುವ ಕಾರಣ ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಅನುಮತಿ ಪಡೆಯುವಂತೆ ಸುಪ್ರೀಂ ಕೋರ್ಟ್ ಹೇಳಿತು.
ಘಟನೆ ಹಿನ್ನೆಲೆ
ನಿಮಿಷಾ ಪ್ರಿಯಾ ಕೇರಳ ಮೂಲದ ಭಾರತೀಯ ನರ್ಸ್ ಆಗಿದ್ದು, ಯೆಮನ್ನಲ್ಲಿ 2017 ರಲ್ಲಿ ಬ್ಯುಸಿನೆಸ್ ಪಾರ್ಟ್ನರ್ ಕೊಲೆ ಆರೋಪದ ಮೇಲೆ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದರು.