ಅಕ್ರಮ ಸಂಬಂಧ ಮುಂದುವರೆಸಲು ಒತ್ತಡ: ಡೆತ್ ನೋಟ್ ಬರೆಸಿಕೊಂಡು ಯುವತಿಗೆ ಕಿರುಕುಳ

ಕೊಪ್ಪಳ: ಅಕ್ರಮ ಸಂಬಂಧ ಬೆಳೆಸಿ ಯುವತಿಗೆ ಕಿರುಕುಳ ನೀಡಿದ್ದಲ್ಲದೆ, ನನ್ನ ಸಾವಿಗೆ ನಾನೇ ಕಾರಣ ಎಂದು ಆಕೆಯಿಂದ ಡೆತ್ ನೋಟ್  ಬರೆಸಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.

ಕುಷ್ಟಗಿಯ ವೀರೇಶ ನಾಯಕ(47) ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಕೊಪ್ಪಳದಲ್ಲಿ ಎಲೆಕ್ಟ್ರಿಕಲ್ ಅಂಗಡಿ ಇಟ್ಟುಕೊಂಡಿರುವ ವೀರೇಶ ನಾಯಕ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಯುವತಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ. ವೀರೇಶನಿಗೆ ಮದುವೆಯಾಗಿ ಮೂವರು ಮಕ್ಕಳಿದ್ದರೂ ಯುವತಿಯೊಂದಿಗೆ ಎರಡು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದ. ಯುವತಿ ಮದುವೆಯಾಗಲು ಒತ್ತಾಯಿಸಿದರೂ ಆರೋಪಿ ಒಪ್ಪದೇ ಅಕ್ರಮ ಸಂಬಂಧ ಮುಂದುವರೆಸುವಂತೆ ಒತ್ತಾಯಿಸಿದ್ದ. ಆಕೆ ನಿರಾಕರಿಸಿದಾಗ ಹಲ್ಲೆ ನಡೆಸಿದ್ದು, ನನ್ನ ಸಾವಿಗೆ ನಾನೇ ಕಾರಣ ಎಂದು ಆಕೆಯಿಂದ ಬಲವಂತವಾಗಿ ಡೆತ್ ನೋಟ್ ಬರೆಸಿಕೊಂಡಿದ್ದಾನೆ. ಮೊಬೈಲ್ ನಲ್ಲಿ ಹೇಳಿಕೆ ಚಿತ್ರೀಕರಿಸಿಕೊಂಡಿದ್ದಾನೆ ಎನ್ನಲಾಗಿದೆ.

ಈತನ ಕಿರುಕುಳದಿಂದ ನೊಂದ ಯುವತಿ ಕೆಲಸ ಬಿಟ್ಟಿದ್ದು, ಪೋಷಕರು ಆಕೆಗೆ ಮದುವೆ ಮಾಡಲು ಮುಂದಾಗಿದ್ದರು. ಇದನ್ನು ತಿಳಿದ ಆರೋಪಿ ಯುವತಿ ಮನೆಗೆ ಹೋಗಿ ಗಲಾಟೆ ನಡೆಸಿದ್ದ. ನೊಂದ ಯುವತಿ ಕುಷ್ಟಗಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read