ಹೆಚ್ಚು ಫಲವತ್ತಾದ ಜನರಿಗೆ ಬೇಗ ಬರುತ್ತೆ ಸಾವು; ಅಧ್ಯಯನದಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ…..!

ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ಕೆಲವೊಂದು ರಹಸ್ಯಗಳನ್ನು ಇದುವರೆಗೂ ಬೇಧಿಸಲು ಸಾಧ್ಯವಾಗಿಲ್ಲ. ವೃದ್ಧಾಪ್ಯ, ಹುಟ್ಟು ಮತ್ತು ಸಾವು, ಮಕ್ಕಳನ್ನು ಹೊಂದುವ ಸಾಮರ್ಥ್ಯದ ನಷ್ಟ ಇವೆಲ್ಲವೂ ವಿಜ್ಞಾನಿಗಳ ಪಾಲಿಗೆ ಕಗ್ಗಂಟಾಗಿಯೇ ಇವೆ. ವೃದ್ಧಾಪ್ಯದಲ್ಲಿ ಫಲವತ್ತತೆ ಏಕೆ ಕಣ್ಮರೆಯಾಗುತ್ತದೆ ಎಂಬ ಒಗಟು ಇಂದಿಗೂ ಬಗೆಹರಿದಿಲ್ಲ. ಇದಕ್ಕೆ ಉತ್ತರ ಕಂಡುಕೊಳ್ಳಲೆಂದೇ ವಿಜ್ಞಾನಿಗಳು ಯುಕೆ ಬಯೋಬ್ಯಾಂಕ್‌ನಲ್ಲಿರುವ 276,406 ಜನರ ಜೀನ್‌ಗಳನ್ನು ಅಧ್ಯಯನ ಮಾಡಿದರು ಮತ್ತು ಫಲವತ್ತತೆಗೆ ಕಾರಣವಾಗುವ ಜೀನ್‌ಗಳು ವೃದ್ಧಾಪ್ಯದಲ್ಲಿ ಕಣ್ಮರೆಯಾಗುತ್ತವೆ ಎಂಬುದನ್ನು ಪತ್ತೆ ಮಾಡಿದ್ದಾರೆ.

ಆದರೆ ಫಲವತ್ತತೆ ಅಥವಾ ಮಕ್ಕಳನ್ನು ಹೊಂದುವ ಸಾಮರ್ಥ್ಯ ಹೆಚ್ಚಾಗಿರುವವರು ಬೇಗನೆ ಸಾಯುವ ಸಾಧ್ಯತೆಗಳಿವೆ ಎಂಬುದು ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ. ಸಂತಾನೋತ್ಪತ್ತಿಯನ್ನು ಉತ್ತೇಜಿಸುವ ಜೀನ್‌ಗಳೊಂದಿಗೆ ಜೀವನದ ಮುಂದಿನ ಹಂತವನ್ನು ಪ್ರವೇಶಿಸುವ ಜನರು ವೃದ್ಧಾಪ್ಯದವರೆಗೆ ಬದುಕುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ವಿಜ್ಞಾನಿಗಳು.

ವಿಜ್ಞಾನಿಗಳ ಪ್ರಕಾರ ಸಂತಾನೋತ್ಪತ್ತಿಯನ್ನು ಉತ್ತೇಜಿಸುವ ರೂಪಾಂತರಗಳು ಜೀವಿತಾವಧಿಯನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ಸಂತಾನೋತ್ಪತ್ತಿಯನ್ನು ಉತ್ತೇಜಿಸುವ ಆನುವಂಶಿಕ ವ್ಯತ್ಯಾಸಗಳನ್ನು ಹೊಂದಿರುವ ಜನರು 76ನೇ ವಯಸ್ಸಿನಲ್ಲಿ ಸಾಯುವ ಸಾಧ್ಯತೆ ಹೆಚ್ಚು. ಫಲವತ್ತತೆಯನ್ನು ಉತ್ತೇಜಿಸುವ ಆನುವಂಶಿಕ ಬದಲಾವಣೆಯು 1940 ರಿಂದ 1969 ರವರೆಗೆ ತಲೆಮಾರುಗಳಾದ್ಯಂತ ಹೆಚ್ಚಾಗಿದೆ ಎಂದು ಅಧ್ಯಯನವು ತೋರಿಸುತ್ತದೆ.

ಹೆಚ್ಚಿನ ಫಲವತ್ತತೆ ಮತ್ತು ಕಡಿಮೆ ಆಯಸ್ಸಿನ ಮಧ್ಯೆ ಸಂಬಂಧವಿದೆ. ಇದು ಆಧುನಿಕ ಕಾಲದಲ್ಲಿ ಕೂಡ ಗೋಚರಿಸಿದೆ. ಹಿಂದೆಂದಿಗಿಂತಲೂ ಆರೋಗ್ಯ ಕ್ಷೇತ್ರ ಮುಂದುವರಿದಿದ್ದರೂ ಈ ಮಾದರಿಯು ಇನ್ನೂ ಕಾಣಿಸಿಕೊಳ್ಳುತ್ತದೆ.

ವೃದ್ಧಾಪ್ಯದಲ್ಲಿ ಮನುಷ್ಯರು ಏಕೆ ಹೆಚ್ಚು ಫರ್ಟೈಲ್‌ ಆಗುವುದಿಲ್ಲ?

ಮನುಷ್ಯರಿಗೆ ವಯಸ್ಸಾದಂತೆ ಮಗುವಿಗೆ ಜನ್ಮ ನೀಡುವ ಸಾಮರ್ಥ್ಯ ಕಡಿಮೆಯಾಗುತ್ತ ಹೋಗುತ್ತದೆ. ದೇಹದ ಆನುವಂಶಿಕ ರೂಪಾಂತರಗಳು ಚಿಕ್ಕ ವಯಸ್ಸಿನಲ್ಲಿ ಫಲವತ್ತತೆಯನ್ನು ಹೆಚ್ಚಿಸುತ್ತವೆ ಮತ್ತು ವೃದ್ಧಾಪ್ಯದತ್ತ ಸಾಗುತ್ತಿರುವಾಗ ಈ ಆನುವಂಶಿಕ ರೂಪಾಂತರಗಳು ಮುಂದುವರಿದರೆ ಅವು ನಮ್ಮನ್ನು ತುಂಬಾ ದುರ್ಬಲ ಮತ್ತು ಅನಾರೋಗ್ಯಕರವಾಗಿಸಬಹುದು. ಅಂದರೆ ಈ ಆನುವಂಶಿಕ ರೂಪಾಂತರವು ಒಳ್ಳೆಯ ಮತ್ತು ಕೆಟ್ಟ ಎರಡೂ ಮುಖಗಳನ್ನು ಹೊಂದಿದೆ. ಪ್ರಾಯದಲ್ಲಿ ಅದು ನಮ್ಮನ್ನು ಫಲವತ್ತಾಗಿ ಮತ್ತು ಬಲಶಾಲಿಯಾಗಿ ಮಾಡುತ್ತದೆ. ಆದರೆ ವೃದ್ಧಾಪ್ಯದಲ್ಲಿ ಅದರ ಉಪಸ್ಥಿತಿಯು ನಮ್ಮನ್ನು ದುರ್ಬಲ ಮತ್ತು ರೋಗಿಗಳನ್ನಾಗಿ ಮಾಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read