ಸಿಎಂ ಡಿನ್ನರ್ ಮೀಟಿಂಗ್ ಬೆನ್ನಲ್ಲೇ ಆಪ್ತ ಶಾಸಕರೊಂದಿಗೆ ಡಿಸಿಎಂ ಡಿನ್ನರ್: ಯತೀಂದ್ರ ಸಿದ್ಧರಾಮಯ್ಯಗೆ ನೋಟಿಸ್ ಕೊಡಲು ಒತ್ತಡ

ಬೆಳಗಾವಿ: ಆಪ್ತ ಸಚಿವರು ಮತ್ತು ಶಾಸಕರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಡಿನ್ನರ್ ಮೀಟಿಂಗ್ ನಡೆಸಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಡಿನ್ನರ್ ಮೀಟಿಂಗ್ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿನ್ನರ್ ಮೀಟಿಂಗ್ ನಡೆದಿದೆ. ಡಿನ್ನರ್ ಮೀಟಿಂಗ್ ನಲ್ಲಿ ಐದು ಸಚಿವರು ಸೇರಿ 40ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದರು. ಸಚಿವರಾದ ಡಾ.ಎಂ.ಸಿ. ಸುಧಾಕರ್, ಶರಣಪ್ರಕಾಶ್ ಪಾಟೀಲ್, ಮಂಕಾಳು ವೈದ್ಯ, ಕೆ.ಹೆಚ್. ಮುನಿಯಪ್ಪ ಮೊದಲಾದವರು ಇದ್ದರು.

ಬೆಳಗಾವಿ ಹೊರವಲಯದಲ್ಲಿನ ಮೈನಿಂಗ್ ಉದ್ಯಮಿ, ಡಿಸಿಎಂ ಆಪ್ತ ದೊಡ್ಡಣ್ಣನವರ್ ರೆಸಾರ್ಟ್ ನಲ್ಲಿ ಡಿಸಿಎಂ ಮತ್ತು ಆಪ್ತರಿಗೆ ಮಾಜಿ ಸಂಸದ ಡಿ.ಕೆ. ಸುರೇಶ್ ಡಿನ್ನರ್ ವ್ಯವಸ್ಥೆ ಮಾಡಿದ್ದರು.

ಸಭೆಯಲ್ಲಿ ಯತೀಂದ್ರ ಸಿದ್ಧರಾಮಯ್ಯ ಹೇಳಿಕೆ ಬಗ್ಗೆ ಚರ್ಚೆ ನಡೆದಿದ್ದು, ಯತೀಂದ್ರ ಅವರಿಗೆ ನೋಟಿಸ್ ಕೊಡುವಂತೆ ಡಿಕೆ ಮೇಲೆ ಒತ್ತಡ ಹೇರಲಾಗಿದೆ. ಈ ವೇಳೆ ಸರಿಯಾದ ಸಮಯಕ್ಕೆ ಉತ್ತರ ಕೊಡುತ್ತೇನೆ ಕಾಯಿರಿ ಎಂದು ಡಿಕೆ ಹೇಳಿದ್ದಾರೆ ಎನ್ನಲಾಗಿದೆ.

ದೆಹಲಿಗೆ ಹೈಕಮಾಂಡ್ ಕರೆದಿರುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಅಗತ್ಯವಿದ್ದರೆ ಹೈಕಮಾಂಡ್ ಭೇಟಿಗೂ ಹೋಗುತ್ತೇವೆ. ಸಿಎಂ ಸ್ಥಾನ ಕೊಡಲೇಬೇಕು ಎಂದು ಮನವಿ ಸಲ್ಲಿಸುತ್ತೇವೆ ಎಂದು ಕೆಲವು ಶಾಸಕರು ಹೇಳಿದ್ದಾರೆ. ಅಧಿಕಾರ ಹಸ್ತಾಂತರದ ಬಗ್ಗೆ ಚರ್ಚೆ ನಡೆದಿದೆ. ಆಪ್ತ ಸಚಿವರು ಮತ್ತು ಶಾಸಕರೊಂದಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಡಿನ್ನರ್ ಮೀಟಿಂಗ್ ನಡೆಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read