ನವದೆಹಲಿ : ಸದನದಲ್ಲಿ ‘RSS’ ಗೀತೆ ಹಾಡಿದ ಡಿ.ಕೆ ಶಿವಕುಮಾರ್ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಎಂಲ್ ಸಿ ಬಿ.ಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಇಂದು ದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಅವರು ಆರ್ ಎಸ್ ಎಸ್ ಗೀತೆ ಹಾಡಿದ್ದು ತಪ್ಪು, ಅದು ಸರಿಯಲ್ಲ. ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಅವರು ಉಪಮುಖ್ಯಮಂತ್ರಿಯಾಗಿ ಹೇಳಿದ್ದರೆ ತಪ್ಪಿಲ್ಲ, ಆದರೆ ಅವರು ಕೆಪಿಸಿಸಿ ಪಕ್ಷದ ಅಧ್ಯಕ್ಷರಾಗಿ ಆರ್ ಎಸ್ ಎಸ್ ಗೀತೆ ಹೇಳಿದ್ದಾರೆ. ಇದು ತಪ್ಪು ಎಂದರು. ಆರ್ ಎಸ್ ಎಸ್ ನ ಮೂರು ಭಾರಿ ನಿಷೇಧ ಮಾಡಲಾಗಿತ್ತು ಎಂದರು. ಕಾಂಗ್ರೆಸ್ ಗೆ ಸಾಕಷ್ಟು ಜನ ಬರ್ತಾರೆ ಹೋಗುತ್ತಾರೆ. ಡಿಕೆಶಿ ಬಿಜೆಪಿ ಸೇರುವ ಧೈರ್ಯ ಮಾಡಲ್ಲ ಎಂದರು.
You Might Also Like
TAGGED:ಬಿ.ಕೆ ಹರಿಪ್ರಸಾದ್