ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಪುಟಾಣಿ ಮಕ್ಕಳ ಗಣೇಶೋತ್ಸವದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದಾರೆ.
ಕನಕಪುರದ ದೊಡ್ಡಾಲಹಳ್ಳಿಯಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ ಪೆಂಡಾಲ್ಗೆ ಭೇಟಿ ನೀಡಿ, ವಿಘ್ನ ನಿವಾರಕ ವಿನಾಯಕನ ದರ್ಶನ ಪಡೆದ ಅವರು, ಶ್ರೀ ಗಣೇಶನ ಆಶೀರ್ವಾದದಿಂದ ನಾಡಿನಲ್ಲಿ ಶಾಂತಿ, ಸಮೃದ್ಧಿ, ಸಂತೋಷ ಸುಭಿಕ್ಷವಾಗಿರಲಿ ಎಂದು ನಾಡಿನ ಒಳಿತಿಗಾಗಿ ಪ್ರಾರ್ಥಿಸಿದ್ದಾರೆ.
ಪ್ರತಿ ವರ್ಷದಂತೆ ಗಣೇಶ ಹಬ್ಬದಂದು ನಮ್ಮ ಪೂರ್ವಜರಿಗೆ ಪೂಜೆ ಸಲ್ಲಿಸುವುದು ನಮ್ಮ ಪದ್ಧತಿ. ನಮ್ಮ ಸ್ವಗ್ರಾಮವಾದ ದೊಡ್ಡಾಲಹಳ್ಳಿಗೆ ಇಂದು ಕುಟುಂಬ ಸಮೇತ ಭೇಟಿ ನೀಡಿ, ನನ್ನ ತಂದೆ, ಅಗಲಿದ ನಮ್ಮ ಕುಟುಂಬದ ಹಿರಿಯರ ಸಮಾಧಿಗೆ ಪೂಜೆ ಸಲ್ಲಿಸಿ, ಪುಷ್ಪ ನಮನ ಸಲ್ಲಿಸಲಾಯಿತು ಎಂದು ತಿಳಿಸಿದ್ದಾರೆ.
ಇದೇ ವೇಳೆ ಅವರು ದೊಡ್ಡಾಲಹಳ್ಳಿಯಲ್ಲಿ ಪುಟಾಣಿ ಮಕ್ಕಳು ಪುಟಾಣಿ ಗಣೇಶನ ಕೂರಿಸಿದ್ದಾರೆ ಎಂದು ತಿಳಿದ ತಕ್ಷಣ ಅಲ್ಲಿಗೆ ಹೋಗಿ ಮಕ್ಕಳ ಜೊತೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅವರ ಜೊತೆ ಫೋಟೋ ತೆಗೆಸಿಕೊಂಡು ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿ ಸಂತೋಷ ಪಟ್ಟಿದ್ದಾರೆ.
ಗಣೇಶ ಹಬ್ಬ ಎಂದರೆ ಸಂತಸ, ಸಂಭ್ರಮ, ಅದೂ ಮಕ್ಕಳ ಹುಮ್ಮಸು ಕಂಡಾಗ ಬಾಲ್ಯದ ದಿನಗಳು ಕಣ್ಣಮುಂದೆ ಹಾದುಬಂತು. ಗಣೇಶ ಈ ಪುಟಾಣಿಗಳಿಗೆ ಒಳ್ಳೆದನ್ನು ಮಾಡಲಿ, ನಮ್ಮ ರಾಜ್ಯದ ಎಲ್ಲ ಮಕ್ಕಳ ಎಲ್ಲ ಆಸೆಗಳನ್ನು ಈಡೇರಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಗಣೇಶ ಬಂದ ಕಾಯಿ ಕಡುಬು ತಂದ…
— DK Shivakumar (@DKShivakumar) August 27, 2025
ಚಿಕ್ಕೆರೆಲಿ ಬಿದ್ದ ದೊಡ್ಡ ಕೆರೇಲಿ ಎದ್ದ…..
ದೊಡ್ಡ ಆಲಹಳ್ಳಿಯಲ್ಲಿ ಪುಟಾಣಿ ಮಕ್ಕಳು ಪುಟಾಣಿ ಗಣೇಶನ ಕೂರಿಸಿದ್ದಾರೆ ಎಂದು ತಿಳಿದ ತಕ್ಷಣ ಅಲ್ಲಿಗೆ ಹೋಗಿ ಮಕ್ಕಳ ಜೊತೆ ಸಂಭ್ರಮದಲ್ಲಿ ಪಾಲ್ಗೊಂಡೆ. ಅವರ ಜೊತೆ ಫೋಟೋ ತೆಗೆಸಿಕೊಂಡು ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿ ಸಂತೋಷ ಪಟ್ಟೆ.
ಗಣೇಶ ಹಬ್ಬ ಎಂದರೆ… pic.twitter.com/d0dnnPFxtp
ವಕ್ರತುಂಡ ಮಹಾಕಾಯ
— DK Shivakumar (@DKShivakumar) August 27, 2025
ಸೂರ್ಯಕೋಟಿ ಸಮಪ್ರಭಃ
ನಿರ್ವಿಘ್ನಂ ಕುರು ಮೇ ದೇವ
ಸರ್ವ ಕಾರ್ಯೇಷು ಸರ್ವದಾ
ಕನಕಪುರದ ದೊಡ್ಡಾಲಹಳ್ಳಿಯಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ ಪೆಂಡಾಲ್ಗೆ ಭೇಟಿ ನೀಡಿ, ವಿಘ್ನ ನಿವಾರಕ ವಿನಾಯಕನ ದರ್ಶನ ಪಡೆದೆ. ಶ್ರೀ ಗಣೇಶನ ಆಶೀರ್ವಾದದಿಂದ ನಾಡಿನಲ್ಲಿ ಶಾಂತಿ, ಸಮೃದ್ಧಿ, ಸಂತೋಷ ಸುಭಿಕ್ಷವಾಗಿರಲಿ ಎಂದು ನಾಡಿನ ಒಳಿತಿಗಾಗಿ… pic.twitter.com/i9Svn2xB6T