ಮೋದಿ ಭೇಟಿಗೆ ಮೊದಲು ಅಮೆರಿಕ ಮಹತ್ವದ ನಿರ್ಧಾರ: ಗ್ರೀನ್ ಕಾರ್ಡ್ ಅರ್ಹತಾ ನಿರ್ಬಂಧ ಸರಳ

ವಾಷಿಂಗ್ಟನ್: ಪ್ರಧಾನಿ ಮೋದಿ ಅಮೆರಿಕ ಭೇಟಿಗೆ ಮೊದಲು ಅಮೆರಿಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಗ್ರೀನ್ ಕಾರ್ಡ್ ಅರ್ಹತೆ ಸರಳಗೊಳಿಸಿದೆ.

ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ವಿದೇಶಿಯರಿಗೆ ಅವಕಾಶ ಕಲ್ಪಿಸಲು ಗ್ರೀನ್ ಕಾರ್ಡ್ ಸೌಲಭ್ಯ ಪಡೆದುಕೊಳ್ಳಲು ವಿಧಿಸಲಾಗಿದ್ದ ಅರ್ಹತಾ ನಿರ್ಬಂಧಗಳನ್ನು ಮತ್ತಷ್ಟು ಸರಳಗೊಳಿಸಲಾಗಿದೆ. ಹೊಸ ನಿಯಮಾವಳಿಗಳನ್ನು ಬಿಡುಗಡೆ ಮಾಡಲಾಗಿದ್ದು, ಅಮೆರಿಕದಲ್ಲಿ ಕೆಲಸ ಮತ್ತು ಮನೆ ಬಯಸುವವರಿಗೆ ಅನುಕೂಲವಾಗಲಿದೆ. ಅಮೆರಿಕದ ಗ್ರೀನ್ ಕಾರ್ಡ್ ನಿರೀಕ್ಷೆಯಲ್ಲಿರುವ ಭಾರತೀಯ ತಾಂತ್ರಿಕ ವೃತ್ತಿ ನಿರತರಿಗೆ ಇದರಿಂದ ಅನುಕೂಲವಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯ ಕೆಲ ದಿನಗಳ ಮುಂಚೆಯೇ ಗ್ರೀನ್ ಕಾರ್ಡ್‌ಗಳಿಗಾಗಿ ಕಾಯುತ್ತಿರುವವರು ಮತ್ತು ಅಮೆರಿಕದಲ್ಲಿ ಉಳಿಯಲು ಅರ್ಹತಾ ಮಾನದಂಡಗಳ ಕುರಿತು ನೀತಿ ಮಾರ್ಗದರ್ಶನವನ್ನು ಬಿಡೆನ್ ಆಡಳಿತವು ಬಿಡುಗಡೆ ಮಾಡುವ ಮೂಲಕ ನಿಯಮಗಳನ್ನು ಸಡಿಲಿಸಿದೆ.

ಅಮೆರಿಕ ಅಧ್ಯಕ್ಷ ಜೋ ಬಿಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 21-24 ರವರೆಗೆ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಭೇಟಿಯ ವೇಳೆ ಜೂನ್ 22 ರಂದು ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read