ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ದಯಾಮರಣಕ್ಕೆ ಅವಕಾಶ: ಆರೋಗ್ಯ ಇಲಾಖೆ ಮಹತ್ವದ ಆದೇಶ

ಬೆಂಗಳೂರು: ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ, ಗುಣಮುಖರಾಗಲು ಸಾಧ್ಯವೇ ಇಲ್ಲದ ರೋಗಿಗಳಿಗೆ ಘನತೆಯಿಂದ ಸಾಯುವ ಹಕ್ಕು ನೀಡಿ ರಾಜ್ಯ ಆರೋಗ್ಯ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಚೇತರಿಕೆ ಕಾಣದ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ದಯಾಮರಣಕ್ಕೆ ಅವಕಾಶ ನೀಡುವುದನ್ನು ನಿರ್ಧರಿಸಲು ಇಬ್ಬರು ವೈದ್ಯರನ್ನೊಳಗೊಂಡ ಎರಡು ಮಂಡಳಿಗಳ ಸ್ಥಾಪನೆ ನಿಟ್ಟಿನಲ್ಲಿಯೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ರಾಜ್ಯ ಆರೋಗ್ಯ ಇಲಾಖೆ ಸುಪ್ರೀಂಕೋರ್ಟ್ ನಿರ್ದೇಶನ ಜಾರಿ ಮಾಡಿದೆ.

ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಯ ಕುಟುಂಬದವರ ಮನವಿ ಮೇರೆಗೆ ವೈದ್ಯರ ತಂಡ ಕಾರ್ಯ ನಿರ್ವಹಿಸಲಿದೆ. ಇದಕ್ಕಾಗಿ ಎರಡು ಪ್ರತ್ಯೇಕ – ಪ್ರೈಮರಿ ಹಾಗೂ ಸೆಕೆಂಡರಿ ಎಂಬ ವೈದ್ಯರ ಸಮಿತಿ ಸ್ಥಾಪಿಸಲಾಗುತ್ತಿದೆ. ಪ್ರೈಮರಿ ಬೋರ್ಡ್ ನಲ್ಲಿ ಮೂವರು ವೈದ್ಯರು, ಸೆಕೆಂಡರಿ ಬೋರ್ಡ್ ನಲ್ಲಿ ಮೂವರು ವೈದ್ಯರು ಇರಲಿದ್ದಾರೆ. ಅವರಲ್ಲಿ ಇಬ್ಬರು ಸರ್ಕಾರಿ ವೈದ್ಯರಾಗಿರುತ್ತಾರೆ. ರೋಗಿಯ ಕುಟುಂಬಸ್ಥರು ಮಾಡುವ ಮನವಿಯನ್ನು ಹಂತಹಂತವಾಗಿ ಈ ಬೋರ್ಡ್ ಪರಿಶೀಲಿಸಿ ವರದಿ ನೀಡುತ್ತದೆ. ಬಳಿಕ ವರದಿ ಕೋರ್ಟ್ ಗೆ ಸಲ್ಲಿಕೆಯಾಗುತ್ತದೆ. ನಂತರ ಕೋರ್ಟ್ ಅನುಮತಿ ನೀಡಿದರೆ ರೋಗಿಯ ಲೈಫ್ ಸಪೋರ್ಟ್ ಸಿಸ್ಟಮ್ ನ್ನು ವೈದ್ಯರು ತೆಗೆಯುತ್ತಾರೆ.

ಕರ್ನಾಟಕ ಸರ್ಕಾರ ಮಹತ್ವದ ಬೆಳವಣಿಗೆಯೊಂದರಲ್ಲಿ ಇದೀಗ ಗಂಭೀರ ಕಾಯಿಲೆಯಿಂದ ಗುಣಮುಖರಾಗಲು ಸಾದ್ಯವೇ ಇಲ್ಲದ ರೋಗಿಗೆ ದಯಾಮರಣಕ್ಕೆ ಅವಕಾಶ ನೀಡುವ ಮೂಲಕ ರೋಗಿ  ಘನತೆಯಿಂದ ಸಾಯುವ ಹಕ್ಕು ನೀಡಿದೆ ಎಂದು ತಿಳಿದುಬಂದಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read