ಅಜಿತ್ ಪವಾರ್ ಜೊತೆ ಗುರುತಿಸಿಕೊಂಡ ಮರುದಿನವೇ ಮತ್ತೆ ಶರದ್ ಪವಾರ್ ಜೊತೆ ಕಾಣಿಸಿಕೊಂಡ ಶಾಸಕ….!

ರಾಜಭವನದಲ್ಲಿ ನಡೆದ ಎನ್​ಸಿಪಿ ಪಕ್ಷದ ನಾಯಕ ಅಜಿತ್​ ಪವಾರ್​​​ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಸತಾರಾ ಜಿಲ್ಲೆಯ ವಾಯ್​ ಕ್ಷೇತ್ರದ ಶಾಸಕ ಮಕರಂದ್​ ಪಾಟೀಲ್​​ ಸೋಮವಾರ ಬೆಳಗ್ಗೆ ಯುಟರ್ನ್​ ಹೊಡೆದಿದ್ದು ಮತ್ತೆ ಎನ್​ಸಿಪಿ ಪಕ್ಷದ ನಾಯಕ ಶರದ್​ ಪವಾರ್​ ಜೊತೆ ಸೇರಿಕೊಂಡಿದ್ದಾರೆ.

ಬೆಳಗ್ಗೆ 8 ಗಂಟೆಗೆ ಪುಣೆಯಿಂದ ಕರಡ್​ಗೆ ತೆರಳಿದ ಶರದ್​ ಪವಾರ್​​ ರನ್ನು ಶಿರವಾಳ ಪಟ್ಟಣದಲ್ಲಿ ಪಾಟೀಲ್​ ಸೇರಿದಂತೆ ಅನೇಕ ನಾಯಕರು ಸ್ವಾಗತಿಸಿದರು.

ಪುಷ್ಪಗುಚ್ಛವನ್ನು ಸ್ವೀಕರಿಸಿದ ಪವಾರ್​​ ಈ ವೇಳೆಯಲ್ಲಿಯೇ ಮಕರಂದ್​ ಪಾಟೀಲ್​ರನ್ನು ತಮ್ಮ ಕಾರಿನಲ್ಲಿಯೇ ಕೂರಿಸಿಕೊಂಡು ತೆರಳಿದ್ದಾರೆ. ದಿನವಿಡೀ ಪವಾರ್​ ಜೊತೆಗಿದ್ದು ಮಹತ್ವದ ಮಾತುಕತೆ ನಡೆಸಿದ ಮಕರಂದ್​ ಪಾಟೀಲ್​ ಬಳಿಕ ಸತಾರಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶರದ್​ ಪವಾರ್​ ಜೊತೆಯಲ್ಲಿ ಸಾರ್ವಜನಿಕವಾಗಿಯೇ ಕಾಣಿಸಿಕೊಂಡಿದ್ದಾರೆ.

ನಿಮ್ಮ ನಿಲುವೇನು ಎಂಬ ಮಾಧ್ಯಮಗಳ ಪ್ರಶ್ನೆಗೆ ಒಂದೇ ವಾಕ್ಯದಲ್ಲಿ ಉತ್ತರಿಸಿದ ಮಕರಂದ್​ ಪಟೇಲ್​, ನಾನು ದಿನವಿಡೀ ಎಲ್ಲಿ ಕುಳಿತಿದ್ದೇನೆ ಎಂದು ನೀವೆಲ್ಲ ನೋಡಿದ್ದೀರಾ. ಈಗಾಗಲೇ ನನ್ನ ನಿಲುವು ಏನು ಅನ್ನೋದು ನಿಮಗೆ ಗೊತ್ತಾಗಿರಬಹುದು ಎಂದು ಹೇಳಿದ್ದಾರೆ. ಅದೇ ರೀತಿ ಶಹಪುರದ ಎನ್​ಸಿಪಿ ಶಾಸಕ ದೌಲತ್​​ ದರೋಡಾ ಕೂಡ ಶರದ್​ ಪವಾರ್​ ಜೊತೆಯಲ್ಲಿ ಇರೋದಾಗಿ ಘೋಷಣೆ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read