ನಟಿಯ ಚಿತ್ರರಂಗದ ಭವಿಷ್ಯವನ್ನೇ ಹಾಳು ಮಾಡಿತ್ತು ಆ ಒಂದು ಫೋಟೋ….!

Dawood Ibrahim was linked to this Bollywood actress, her career ended after their photos watching cricket match went viral : The Tribune India

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆರೋಗ್ಯ ಸಮಸ್ಯೆಯಿಂದ ಕರಾಚಿಯ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮೂಲಗಳ ಪ್ರಕಾರ ಅವರಿಗೆ ವಿಷಪ್ರಾಶನವಾಗಿದೆ ಎಂದು ವರದಿಗಳು ಹೇಳುತ್ತಿವೆ. ಮುಂಬೈ ಆಳಿದ್ದ ಡಿ ಕಂಪನಿಯ ದಾವೂದ್ ಜೊತೆಗಿನ ನಂಟು ಒಂದು ಕಾಲದಲ್ಲಿ ಆ ನಟಿಯನ್ನ ಬಣ್ಣದ ಬದುಕು ದೂರ ಮಾಡಿತು. ದಾವುದ್ ಜೊತೆ ಕಾಣಿಸಿಕೊಂಡ ನಟಿಯ ಫೋಟೋ ಹರಿದಾಡಿದ ನಂತರ ಆಕೆಗೆ ಸಿನಿಮಾದಲ್ಲಿ ಆಫರ್ ಗಳೇ ಸಿಗಲಿಲ್ಲ.

ಯಾಸ್ಮೀನ್ ಜೋಸೆಫ್ ಅಲಿಯಾಸ್ ನಟಿ ಮಂದಾಕಿನಿ 90ರ ದಶಕದಲ್ಲಿ ಖ್ಯಾತರಾಗಿದ್ದರು. ರಾಜ್ ಕಪೂರ್ ಕೊನೆಯ ನಿರ್ದೇಶನದ ಚಿತ್ರ ʼರಾಮ್ ತೇರಿ ಗಂಗಾ ಮೈಲಿʼ ಅವರಿಗೆ ಹೆಚ್ಚಿನ ಹೆಸರು ತಂದುಕೊಟ್ಟಿತು. ಆದರೆ 1994 ರಲ್ಲಿ ದಾವೂದ್ ಜೊತೆಗಿನ ಮಂದಾಕಿನಿ ಫೋಟೋಗಳು ವೈರಲ್ ಆಗಿದ್ದವು. ಅದರಲ್ಲಿ ಇಬ್ಬರೂ ಒಟ್ಟಿಗೆ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಿದ್ದರು. ಇದರಿಂದ ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಪ್ರಾರಂಭವಾದವು. ದಾವೂದ್ ಈ ಫೋಟೋ ಹರಿದಾಡಿದ ಒಂದು ವರ್ಷದ ಹಿಂದೆ 1993 ರ ಬಾಂಬೆ ಮೇಲೆ ಬಾಂಬ್ ದಾಳಿಯ ಮಾಸ್ಟರ್ ಮೈಂಡ್ ಎಂದು ಹೆಸರಿಸಲ್ಪಟ್ಟಿದ್ದರಿಂದ, ಈ ಫೋಟೋಗಳು ಮಂದಾಕಿನಿಯ ವೃತ್ತಿಜೀವನದ ಅವನತಿಗೆ ಕಾರಣವಾದವು.

ಆ ಫೋಟೋಗಳು ಹರಿದಾಡಿದ ನಂತರ ನಿರ್ಮಾಪಕರು ಮತ್ತು ನಿರ್ದೇಶಕರು ಮಂದಾಕಿನಿಗೆ ಯಾವುದೇ ಚಿತ್ರದಲ್ಲಿ ಅವಕಾಶ ನೀಡಲಿಲ್ಲ. ಮಂದಾಕಿನಿ 1980 ರ ದಶಕದ ಉತ್ತರಾರ್ಧದಲ್ಲಿ ಡ್ಯಾನ್ಸ್ ಡ್ಯಾನ್ಸ್, ಮಾಲಾಮಾಲ್ ಮತ್ತು ದುಷ್ಮನ್ ಮುಂತಾದ ಅನೇಕ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ರಾಮ್ ತೇರಿ ಗಂಗಾ ಮೈಲಿ ಯಶಸ್ಸು ಅವರಿಗೆ ಹೆಚ್ಚಿನ ಹೆಸರು ತಂದುಕೊಟ್ಟಿತು ಜೊತೆಗೆ ಕೆಲ ವಿವಾದಗಳನ್ನೂ ಹುಟ್ಟುಹಾಕಿತು.

ಮಂದಾಕಿನಿಯ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಅವರು ಮಾಜಿ ಬೌದ್ಧ ಸನ್ಯಾಸಿ ಡಾ. ಕಗ್ಯೂರ್ ಟಿ ರಿಂಪೋಚೆ ಠಾಕೂರ್ ಅವರನ್ನು ವಿವಾಹವಾದರು. ಈ ದಂಪತಿಗೆ ಇನಾಯಾ ಎಂಬ ಮಗಳು ಮತ್ತು ರಬ್ಬಿಲ್ ಎಂಬ ಮಗ ಇದ್ದಾರೆ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read