ಭಾರತ ಪ್ರವಾಸದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್​: ಸುಂದರ ವಿಡಿಯೋ ವೈರಲ್​

ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಭಾರತದ ಬಗ್ಗೆ ಇದಾಗಲೇ ಹಲವಾರು ಬಾರಿ ಮಾತನಾಡಿದ್ದಾರೆ.ಇವರು ಭಾರತವನ್ನು ಬಹಳಷ್ಟು ಇಷ್ಟಪಡುತ್ತಾರೆ ಮತ್ತು ಅವರ ಪೋಸ್ಟ್‌ಗಳು ಭಾರತೀಯ ಸಂಸ್ಕೃತಿ, ಪಾಕಪದ್ಧತಿ ಮತ್ತು ಚಲನಚಿತ್ರಗಳ ಶ್ಲಾಘನೆಗಳಿಂದ ತುಂಬಿ ಹೋಗಿವೆ.

ವಾರ್ನರ್ ಇನ್‌ಸ್ಟಾಗ್ರಾಮ್‌ನಲ್ಲಿ ಸದಾ ಒಂದಿಲ್ಲೊಂದು ವಿಷಯಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಬಾಲಿವುಡ್ ಮತ್ತು ಟಾಲಿವುಡ್ ಹಾಡುಗಳ ಲಿಪ್-ಸಿಂಕ್ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಕೆಲವೇ ವಾರಗಳ ಹಿಂದೆ, ಅವರು ಪಠಾಣ್​ ಚಲನಚಿತ್ರದ ಶಾರುಖ್ ಖಾನ್ ಅವರ ಮುಖವನ್ನು ಜೋಡಿಸಿದ ಸ್ವತಃ ಎಡಿಟ್ ಮಾಡಿದ ವೀಡಿಯೊವನ್ನು ಹಂಚಿಕೊಂಡಿದ್ದರು.

ವಾರ್ನರ್ ಅವರ ಇತ್ತೀಚಿನ ವೀಡಿಯೊವು ಅವರ ಕುಟುಂಬ ದೆಹಲಿ ಪ್ರವಾಸ ಮಾಡಿರುವುದನ್ನು ತೋರಿಸುತ್ತದೆ. ಕುಟುಂಬವು ದೆಹಲಿಯ ಜನಪ್ರಿಯ ಪ್ರವಾಸಿ ಆಕರ್ಷಣೆಗಳಾಗಿರುವ ಮೊಘಲ್ ಇಂಡಿಯಾಕ್ಕೆ ಭೇಟಿ ನೀಡಿರುವುದನ್ನು ವಿಡಿಯೋದಲ್ಲಿ ಶೇರ್​ ಮಾಡಿಕೊಳ್ಳಲಾಗಿದೆ. ಕುಟುಂಬವು ಹುಮಾಯೂನ್ ಸಮಾಧಿಯ ಸುತ್ತಲೂ ನಡೆಯುವುದನ್ನು ಇದರಲ್ಲಿ ಕಾಣಬಹುದು.

“ದೆಹಲಿಯಲ್ಲಿ ನಮ್ಮ ರಜೆಯ ದಿನಗಳ ಒಂದು ಸಣ್ಣ ತುಣುಕು. ಕೆಲವು ಸುಂದರ ಸ್ಥಳಗಳನ್ನು ನೋಡುತ್ತಿದ್ದೇವೆ ಎಂದಿರುವ ಅವರು, ನಾವು ಬೇರೆಲ್ಲಿಗೆ ಭೇಟಿ ನೀಡಬೇಕು ಎಂಬುದನ್ನು ತಿಳಿಸಿ ಎಂದಿದ್ದಾರೆ. ಅವರ ಪ್ರಶ್ನೆಗೆ ಸಾವಿರಾರು ಪ್ರತಿಕ್ರಿಯೆಗಳು ಬಂದಿದ್ದು, ವಿವಿಧ ಸ್ಥಳಗಳ ಮಾಹಿತಿಯನ್ನು ನೆಟ್ಟಿಗರು ನೀಡುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read