ದೇವರ ಮನೆಯಲ್ಲಿ ದೀಪ ಹಚ್ಚುವಾಗ ಇರಲಿ ಎಚ್ಚರ…..! ಬೆಂಕಿ ಅವಘಡಕ್ಕೆ ಹೊತ್ತಿ ಉರಿದ ಇಡೀ ಮನೆ

ದಾವಣಗೆರೆ: ದೇವರ ಮನೆಯಲ್ಲಿ ಹಚ್ಚಿಟ್ಟಿದ್ದ ದೀಪದಿಂದ ಬೆಂಕಿ ಅವಘಡ ಸಂಭವಿಸಿ ಇಡೀ ಮನೆಯೇ ಸುಟ್ಟು ಕರಕಲಾಗಿರುವ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮದಲ್ಲಿ ನಡೆದಿದೆ.

ಬಡಪ್ಪ ಎಂಬುವವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ದೇವರ ಮನೆಯಲ್ಲಿ ದೀಪ ಹಚ್ಚಿಟ್ಟು ಮನೆಯವರೆಲ್ಲರೂ ಕಾರ್ಯಕ್ರಮದ ನಿಮಿತ್ತ ಮನೆಗೆ ಬೀಗ ಹಾಕಿ ಹೊರಗೆ ಹೋಗಿದ್ದರು. ದೇವ ಮುಂದಿದ್ದ ದೀಪ ಬಟ್ಟೆಗೆ ತಗುಲಿ ಬೆಂಕಿ ಹೊತ್ತಿಕೊಂಡಿದ್ದು, ಹೀಗೆ ಹೊತ್ತಿಕೊಂಡ ಬೆಂಕಿ ಇಡೀ ಮನೆಯನ್ನೂ ವ್ಯಾಪಿಸಿದೆ.

ಮನೆಯಲ್ಲಿದ್ದ ವಸ್ತುಗಳು, ಹಣ, ಒಡವೆ, ಧಾನ್ಯ ಎಲ್ಲವೂ ಬೆಂಕಿಗಾಹುತಿಯಾಗಿವೆ. ಕುಟುಂಬದವರು ಮನೆಗೆ ವಾಪಾಸ್ ಆಗುವಷ್ಟರಲ್ಲಿ ಇಡೀ ಮನೆ ಸುಟ್ಟು ಕರಕಲಾಗಿದೆ. ಕುಟುಂಬದವರು ಕಂಗಾಲಾಗಿದ್ದಾರೆ.

ಘಟನಾ ಸ್ಥಳಕ್ಕೆ ಜಗಳೂರು ತಾಲೂಕು ದಂಡಾಧಿಕಾರಿ ಭೇಟಿ ನೀಡಿ ಪರಿಶಿಲಿಸಿದ್ದು, ಬೆಂಕಿ ಅವಘಡದಿಂದ ಆಗಿರುವ ನಷ್ಟ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read