ತಂದೆಯಿಂದಲೇ ಖಾಸಗಿ ವಿಡಿಯೋ ವೈರಲ್: ಆತ್ಮಹತ್ಯೆಗೆ ಯತ್ನಿಸಿದ ಪುತ್ರಿ

ಉಡುಪಿ: ವ್ಯಕ್ತಿಯೊಬ್ಬ ತನ್ನ 18 ವರ್ಷದ ಪುತ್ರಿಯ ಖಾಸಗಿ ವಿಡಿಯೋ ಹರಿಬಿಟ್ಟ ಆರೋಪ ಕೇಳಿ ಬಂದಿದ್ದು, ಆತನ ವಿರುದ್ಧ ಪತ್ನಿ ದೂರು ನೀಡಿದ್ದಾರೆ.

ತಂದೆಯ ಕೃತ್ಯದಿಂದ ಮನನೊಂದ ಪುತ್ರಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ಉಡುಪಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಡುಬಿದ್ರಿ ಸಮೀಪದ ಕಂಚಿನಟ್ಕ ನಿವಾಸಿ ಆಸಿಫ್ ಪುತ್ರಿ ಸಂಬಂಧಿಕನೇ ಆಗಿದ್ದ ತೀರ್ಥಹಳ್ಳಿ ಮೂಲದ ಯುವಕನನ್ನು ಪ್ರೀತಿಸಿದ್ದರು. ಇದು ಆಸಿಫ್ ಗೆ ಇಷ್ಟವಿರಲಿಲ್ಲ.

ಬಳಿಕ ಯುವಕನನ್ನು ಮನೆಗೆ ಕರೆಸಿ ಹಲ್ಲೆ ನಡೆಸಿದ್ದ ಆಸಿಫ್, ಯುವಕ ಮತ್ತು ಪುತ್ರಿಯ ಮೊಬೈಲ್ ಕಸಿದುಕೊಂಡು ಅದರಲ್ಲಿದ್ದ ಫೋಟೋ, ವಿಡಿಯೋಗಳನ್ನು ತನ್ನ ಮೊಬೈಲ್ ಗೆ ಕಳಿಸಿಕೊಂಡಿದ್ದಾನೆ. ಅವುಗಳನ್ನು ವಾಟ್ಸಾಪ್ ಗ್ರೂಪ್ ಸೇರಿದಂತೆ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ. ಇದನ್ನು ವಿರೋಧಿಸಿದ ಪತ್ನಿ ಮತ್ತು ಪುತ್ರಿಯ ಮೇಲೆ ಹಲ್ಲೆ ನಡೆಸಿದ್ದು, ಇಬ್ಬರೂ ಗಾಯಗೊಂಡಿದ್ದಾರೆ. ಪುತ್ರಿ ಆತ್ಮಹತ್ಯೆಗೆ ಯತ್ನಿಸಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸಿಫ್ ವಿರುದ್ಧ ಆತನ ಪತ್ನಿ ಉಡುಪಿ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read