ವೈದ್ಯ ವೃತ್ತಿ ತ್ಯಜಿಸಿ ಐಎಎಸ್ ಆದ ಬಸ್ ಕಂಡಕ್ಟರ್ ಪುತ್ರಿ ; ಇವರ ಯಶೋಗಾಥೆ ನಿಜಕ್ಕೂ ಸ್ಪೂರ್ತಿದಾಯಕ !

“ಶ್ರಮ ಪಟ್ಟವರಿಗೆ ಯಶಸ್ಸು ಖಂಡಿತ. ಕನಸುಗಳಿಗೆ ಹಣ ಅಥವಾ ಸವಲತ್ತುಗಳ ಅಗತ್ಯವಿಲ್ಲ, ಧೈರ್ಯ, ತಾಳ್ಮೆ, ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಇದ್ದರೆ ಸಾಕು” ಎಂಬ ಮಾತಿಗೆ ಸ್ಪೂರ್ತಿಯಾಗಿ ನಿಲ್ಲುತ್ತಾರೆ ರೇಣು ರಾಜ್. ಸಾಮಾನ್ಯ ಬಸ್ ಕಂಡಕ್ಟರ್ ಮಗಳಾದ ರೇಣು, ವೈದ್ಯ ವೃತ್ತಿ ತ್ಯಜಿಸಿ, ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ತೇರ್ಗಡೆಗೊಂಡು, ಅಖಿಲ ಭಾರತ ಮಟ್ಟದಲ್ಲಿ 2ನೇ ರ‍್ಯಾಂಕ್ ಗಳಿಸಿ ಐಎಎಸ್ ಅಧಿಕಾರಿಯಾಗಿದ್ದಾರೆ.

ರೇಣು ರಾಜ್ ಯಾರು? ಡಾ. ರೇಣು ರಾಜ್ ಕೇರಳದ ಕೊಟ್ಟಾಯಂ ಮೂಲದವರು. ಅವರ ತಂದೆ ಎಂ.ಕೆ. ರಾಜಕುಮಾರ್ ನಾಯರ್ ಸರ್ಕಾರಿ ಬಸ್ ಕಂಡಕ್ಟರ್ ಆಗಿ ಸೇವೆ ಸಲ್ಲಿಸಿದ್ದರೆ, ತಾಯಿ ಗೃಹಿಣಿ. ಸಾಧಾರಣ ಕುಟುಂಬದಿಂದ ಬಂದಿದ್ದರೂ, ರೇಣು ಎಂದಿಗೂ ತಮ್ಮ ಗುರಿಗಳನ್ನು ಬಿಟ್ಟುಕೊಡಲಿಲ್ಲ. ಚಿಕ್ಕ ವಯಸ್ಸಿನಿಂದಲೇ ಜೀವನದಲ್ಲಿ ಏನಾದರೂ ಮಹತ್ವ ಸಾಧಿಸುವ ಕನಸು ಕಂಡಿದ್ದರು.

ವೈದ್ಯಕೀಯ ಅಧ್ಯಯನ ಮತ್ತು ವೃತ್ತಿ ರೇಣು ಕೊಟ್ಟಾಯಂನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಅಧ್ಯಯನ ಪೂರ್ಣಗೊಳಿಸಿ ಶಸ್ತ್ರಚಿಕಿತ್ಸಕರಾಗಿ ಸೇವೆ ಸಲ್ಲಿಸಲು ಆರಂಭಿಸಿದರು. ಆದರೆ, ವೈದ್ಯೆಯಾಗಿ ನೂರಾರು ರೋಗಿಗಳಿಗೆ ಸಹಾಯ ಮಾಡಲು ಸಾಧ್ಯವಾದರೂ, ಸಮಾಜದಲ್ಲಿ ದೊಡ್ಡ ಪರಿವರ್ತನೆ ತರಲು ಐಎಎಸ್ ಅಧಿಕಾರಿಯಾಗುವುದೇ ಉತ್ತಮ ಮಾರ್ಗ ಎಂದು ಅವರಿಗೆ ಮನವರಿಕೆಯಾಯಿತು. ಈ ದೃಢ ಸಂಕಲ್ಪದೊಂದಿಗೆ, ಅವರು ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ಆರಂಭಿಸಿದರು.

ಯುಪಿಎಸ್‌ಸಿ ತಯಾರಿ ಮತ್ತು ಸಾಧನೆ ವೈದ್ಯಕೀಯ ವೃತ್ತಿಯ ಜೊತೆಜೊತೆಗೆ, ರೇಣು ಪ್ರತಿದಿನ 6 ರಿಂದ 8 ಗಂಟೆಗಳ ಕಾಲ ಯುಪಿಎಸ್‌ಸಿ ಪರೀಕ್ಷೆಗೆ ಅಧ್ಯಯನ ಮಾಡಿದರು. 2014ರ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾದರು. ಅಷ್ಟೇ ಅಲ್ಲ, ಅಖಿಲ ಭಾರತ ಮಟ್ಟದಲ್ಲಿ 2ನೇ ರ‍್ಯಾಂಕ್ ಗಳಿಸುವ ಮೂಲಕ ಎಲ್ಲರ ಹುಬ್ಬೇರಿಸಿದರು.

ಐಎಎಸ್ ಅಧಿಕಾರಿಯಾಗಿ ರೇಣು ರಾಜ್ ಮಾಧ್ಯಮ ವರದಿಗಳ ಪ್ರಕಾರ, ರೇಣು ಅವರಿಗೆ ಕೇರಳ ಕೆಡೆರ್ ನಿಯೋಜಿಸಲಾಯಿತು. ವೈದ್ಯ ವೃತ್ತಿ ಬಿಟ್ಟು ಐಎಎಸ್ ಏಕೆ ಆಯ್ದುಕೊಂಡಿರಿ ಎಂದು ಕೇಳಿದಾಗ, “ವೈದ್ಯೆಯಾಗಿ ನಾನು ನೂರು ರೋಗಿಗಳಿಗೆ ಸಹಾಯ ಮಾಡಬಹುದು. ಆದರೆ ಐಎಎಸ್ ಅಧಿಕಾರಿಯಾಗಿ ಸಾವಿರಾರು ಜನರ ಜೀವನವನ್ನು ಬದಲಾಯಿಸಬಹುದು” ಎಂದು ಉತ್ತರಿಸಿದ್ದರು. ಐಎಎಸ್ ಆದ ನಂತರ, ರೇಣು ಕೇರಳದ ಹಲವು ಜಿಲ್ಲೆಗಳಲ್ಲಿ ಎಸ್‌ಡಿಎಂ ಮತ್ತು ಡಿಎಂ ಆಗಿ ಸೇವೆ ಸಲ್ಲಿಸಿದ್ದಾರೆ. 2022ರಲ್ಲಿ, ಅವರು ಐಎಎಸ್ ಅಧಿಕಾರಿ ಶ್ರೀರಾಮ್ ವೆಂಕಟರಮಣನ್ ಅವರನ್ನು ವಿವಾಹವಾದರು.

ಪ್ರತಿ ವರ್ಷ ಕೇಂದ್ರ ಲೋಕಸೇವಾ ಆಯೋಗವು (UPSC) ನಡೆಸುವ ಸಿವಿಲ್ ಸರ್ವೀಸಸ್ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಹತ್ತು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಾರೆ. ಈ ಪರೀಕ್ಷೆಯು ಮೂರು ಹಂತಗಳಲ್ಲಿ ನಡೆಯುತ್ತದೆ: ಪ್ರಾಥಮಿಕ, ಮುಖ್ಯ ಮತ್ತು ಸಂದರ್ಶನ/ವ್ಯಕ್ತಿತ್ವ ಪರೀಕ್ಷೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read