ತಾಯಿಯನ್ನೇ ಕೊಂದ ಪುತ್ರಿ: ವರ್ಷದ ಬಳಿಕ ಬಯಲಾಯ್ತು ಕೊಲೆ ರಹಸ್ಯ

ಮಂಡ್ಯ: ಪತಿಯೊಂದಿಗೆ ಸೇರಿ ತಾಯಿಯನ್ನೇ ಪುತ್ರಿ ಕೊಲೆ ಮಾಡಿದ ಘಟನೆ ಒಂದು ವರ್ಷ ಮೂರು ತಿಂಗಳ ನಂತರ ಬೆಳಕಿಗೆ ಬಂದಿದೆ.

ಮಂಡ್ಯ ತಾಲೂಕಿನ ಹೆಬ್ಬಕವಾಡಿ ಗ್ರಾಮದ ಶಾರದಮ್ಮ(50) ಕೊಲೆಯಾದ ಮಹಿಳೆ‌. ಶಾರದಮ್ಮ ಪುತ್ರಿ ಅನುಷಾ ಮತ್ತು ಆಕೆಯ ಪತಿ ಮೈಸೂರು ಸಮೀಪದ ಹಾರೋಹಳ್ಳಿಯ ದೇವರಾಜು ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಪತಿ ಕಳೆದುಕೊಂಡಿದ್ದ ಶಾರದಮ್ಮ ಹೆಬ್ಬಕವಾಡಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದರು. ಪುತ್ರಿ ಅನುಷಾರನ್ನು ದೇವರಾಜುಗೆ ಕೊಟ್ಟು ಮದುವೆ ಮಾಡಿದ್ದರು. ಆಗಾಗ ಹಾರೋಹಳ್ಳಿಗೆ ಹೋಗಿ ಮಗಳನ್ನು ನೋಡಿಕೊಂಡು ಬರುತ್ತಿದ್ದರು. 2022ರ ನವೆಂಬರ್ ನಿಂದ ಶಾರದಮ್ಮ ಅವರು ನಾಪತ್ತೆಯಾಗಿದ್ದರು.

ಹಾರೋಹಳ್ಳಿಯ ಪುತ್ರಿ ಮನೆಯಲ್ಲಿ ಇದ್ದ ವೇಳೆ ಜಗಳವಾಗಿದ್ದು, ಜಗಳದ ವೇಳೆ ಕೆಳಗೆ ಬಿದ್ದು ಶಾರದಮ್ಮ ಮೃತಪಟ್ಟಿದ್ದಾರೆ. ಗಾಬರಿಯಾದ ಅನುಷಾ ಮತ್ತು ದೇವರಾಜು ಮೃತ ದೇಹವನ್ನು ಹೆಬ್ಬಕವಾಡಿಗೆ ಸಾಗಿಸಿ ಸ್ಮಶಾನದಲ್ಲಿ ಹೂತು ಹಾಕಿದ್ದಾರೆ. ಯಾರಿಗೂ ತಿಳಿಯದಂತೆ ನೋಡಿಕೊಂಡಿದ್ದಾರೆ.

ಆರೇಳು ತಿಂಗಳ ನಂತರ ವರುಣಾ ಠಾಣೆಗೆ ತೆರಳಿ ತಾಯಿ ನಾಪತ್ತೆಯಾದ ಬಗ್ಗೆ ಅನುಷಾ ದೂರು ದಾಖಲಿಸಿದ್ದಾಳೆ. ಹೆಬ್ಬಕಾವಾಡಿ ಮತ್ತು ಹಾರೋಹಳ್ಳಿಗೆ ಪೊಲೀಸರು ಹೋಗಿ ವಿಚಾರಣೆ ನಡೆಸಿದ್ದಾರೆ. ಪುತ್ರಿ ಮತ್ತು ಅಳಿಯನ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದ್ದು, ಆಕಸ್ಮಿಕ ಘಟನೆ ಎಂದು ಒಪ್ಪಿಕೊಂಡಿದ್ದಾರೆ.

ಪ್ರಕರಣ ಮಂಡ್ಯ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿದ್ದು, ಭಾನುವಾರ ಮಧ್ಯಾಹ್ನ ಶವ ಹೂತಿಟ್ಟ ಸ್ಥಳವನ್ನು ಆರೋಪಿ ತೋರಿಸಿದ್ದಾನೆ. ತಹಶೀಲ್ದಾರ್ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಭೂಮಿ ಅಗೆದಾಗ ಮೃತದೇಹ ಕಂಡುಬಂದಿಲ್ಲ. ಕತ್ತಲಾದ ಹಿನ್ನೆಲೆಯಲ್ಲಿ ನಾಳೆ ಮೃತದೇಹಕ್ಕಾಗಿ ಶೋಧ ನಡೆಸಲಾಗುವುದು ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read