ಬಾಯ್‌ಫ್ರೆಂಡ್ ಜೊತೆ ಮಾತಾಡ್ತಿದ್ದಾಗಲೇ ಸಿಕ್ಕಿಬಿದ್ದ ಪುತ್ರಿ ; ಅಮ್ಮ ಕೊಟ್ಟ ಶಿಕ್ಷೆ ವಿಡಿಯೋ ವೈರಲ್‌ | Watch

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಈ ವಿಡಿಯೋದಲ್ಲಿ ಒಬ್ಬ ಅಮ್ಮ ತನ್ನ ಮಗಳು ಬಾಯ್‌ಫ್ರೆಂಡ್ ಜೊತೆ ಮಾತಾಡ್ತಿರೋದನ್ನು ರೆಡ್ ಹ್ಯಾಂಡ್‌ ಆಗಿ ಹಿಡಿದು, ಆಮೇಲೆ ಆಕೆಗೆ ಒಂದು ಸ್ಪೆಷಲ್ ಶಿಕ್ಷೆ ಕೊಡ್ತಾಳೆ. @adultsutra ಅನ್ನೋ ಇನ್‌ಸ್ಟಾಗ್ರಾಮ್ ಅಕೌಂಟ್‌ನಿಂದ ಶೇರ್ ಆಗಿರೋ ಈ ವಿಡಿಯೋ ಸಖತ್ ವೈರಲ್ ಆಗ್ತಿದೆ.

ವಿಡಿಯೋದಲ್ಲಿ ಆ ಹುಡುಗಿ ತನ್ನ ರೂಮಲ್ಲಿ ಯಾರ ಜೊತೆನೋ ಫೋನ್‌ನಲ್ಲಿ ಮಾತಾಡ್ತಾ ಇರ್ತಾಳೆ. ಆಗ ಅವಳ ಅಮ್ಮ ಬಂದು ಹಿಡಿದುಬಿಡ್ತಾಳೆ. ತಕ್ಷಣ ಅಮ್ಮ, “ಫೋನ್ ಸ್ಪೀಕರ್‌ಗೆ ಹಾಕು ಯಾರ ಹತ್ರ ಮಾತಾಡ್ತಿದೀಯಾ ಅಂತ ನನಗೂ ಕೇಳಿಸಲಿ” ಅಂತಾಳೆ. ಫೋನ್ ಸ್ಪೀಕರ್‌ಗೆ ಹಾಕಿದ ತಕ್ಷಣ ಆ ಕಡೆಯಿಂದ ಒಂದು ಹುಡುಗನ ಧ್ವನಿ ಕೇಳಿಸುತ್ತೆ. ಅವನು “ಊಟ ಆಯ್ತಾ?” ಅಂತ ಕೇಳ್ತಾನೆ. ಅಷ್ಟೇ, ಅಮ್ಮನಿಗೆ ಸಿಟ್ಟು ನೆತ್ತಿಗೇರುತ್ತೆ. “ಬಂದು ಉಣಿಸು ಅವಳಿಗೆ” ಅಂತ ಗರ್ಜಿಸ್ತಾಳೆ.

ಇದಾದ್ಮೇಲೆ ಫೋನ್‌ನಲ್ಲಿ ಸೈಲೆನ್ಸ್! ಆ ಹುಡುಗನಿಗೆ ಗೊತ್ತಾಗಿಬಿಡುತ್ತೆ ತನ್ನ ಗರ್ಲ್‌ಫ್ರೆಂಡ್ ಅಮ್ಮನ ಕೈಗೆ ಸಿಕ್ಕಿಬಿದ್ದಿದ್ದಾಳೆ ಅಂತ. ಸಿಟ್ಟಿನಿಂದ ಕೆಂಡಾಮಂಡಲರಾದ ಅಮ್ಮ, ಮಗಳಿಗೆ ಒಂದೇಟು ಕೊಟ್ಟುಬಿಡ್ತಾಳೆ ! ಈ ವಿಡಿಯೋದಲ್ಲಿ ಅಮ್ಮನ ಚಿಂತೆ ಮತ್ತು ಕೋಪ ಸ್ಪಷ್ಟವಾಗಿ ಕಾಣಿಸುತ್ತೆ. ಯಾಕಂದ್ರೆ ತನ್ನ ಮಗಳು ಕೆಟ್ಟ ಸಹವಾಸಕ್ಕೆ ಬೀಳಬಾರದು ಅನ್ನೋದು ಅವರ ಕಾಳಜಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read