ಸೌಂದರ್ಯ ಹೆಚ್ಚಿಸುತ್ತೆ ʼಖರ್ಜೂರʼ

ಹಲವಾರು ಪೋಷಕಾಂಶಗಳು ಮತ್ತು ಖನಿಜಗಳ ಆಗರವಾಗಿರುವ ಖರ್ಜೂರ ಉತ್ತಮ ಸೌಂದರ್ಯವರ್ಧಕವೂ ಹೌದು. ಖರ್ಜೂರವನ್ನು ಸೇವಿಸುತ್ತಾ ಬರುವ ಮೂಲಕ ಚರ್ಮಕ್ಕೆ ಉತ್ತಮ ಪೋಷಣೆ ಪಡೆಯಬಹುದು. ಅಷ್ಟೇ ಅಲ್ಲದೇ, ಇನ್ನೂ ಹಲವು ಪ್ರಯೋಜನಗಳ ವಿವರ ತಿಳಿಯೋಣ.

* ಖರ್ಜೂರದಿಂದ ಹಿಂಡಿ ತೆಗೆದ ತೈಲ ಕೂದಲ ಬುಡವನ್ನು ದೃಢಗೊಳಿಸುತ್ತದೆ. ಹಲವಾರು ಪೋಷಕಾಂಶಗಳನ್ನು ಹೊಂದಿರುವ ಈ ತೈಲ ತಲೆ ಬುಡದ ಚರ್ಮ ಒಣಗುವುದನ್ನು ಕಡಿಮೆಗೊಳಿಸಿ ಕೂದಲು ಆರೋಗ್ಯಕರವಾಗಿ, ಉದ್ದವಾಗಿ ಬೆಳೆಯಲು ನೆರವಾಗುತ್ತದೆ.

* ಖರ್ಜೂರದಲ್ಲಿರುವ ವಿಟಮಿನ್ ಸಿ ಚರ್ಮದ ಸೆಳೆತವನ್ನು ಹೆಚ್ಚಿಸಿ ಕಾಂತಿಯುಕ್ತವಾಗಿಸುತ್ತವೆ. ಅಲ್ಲದೇ ಚರ್ಮಕ್ಕೆ ಒಳಗಿನಿಂದ ಆರ್ದ್ರತೆಯನ್ನು ಒದಗಿಸುವ ಮೂಲಕ ಕೋಮಲತೆ ನೀಡುತ್ತದೆ ಹಾಗೂ ನೆರಿಗೆಮುಕ್ತವಾಗಿಸುತ್ತದೆ.

* ನೆರಿಗೆ ಮತ್ತು ಸೂಕ್ಷ್ಮವಾದ ಗೆರೆಗಳು ವೃದ್ಧಾಪ್ಯದ ಸಂಕೇತವಾಗಿದ್ದು, ಇವು ಬರುವುದನ್ನು ತಡವಾಗಿಸುವ ಮೂಲಕ ತಾರುಣ್ಯವನ್ನು ಬಹುಕಾಲದವರೆಗೆ ಕಾಪಾಡಿಕೊಳ್ಳಲು ಖರ್ಜೂರ ನೆರವಾಗುತ್ತದೆ.

* ಪ್ರತಿದಿನ ಸುಮಾರು ಎರಡರಿಂದ ಮೂರು ಖರ್ಜೂರಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ ಕೂದಲು ಉದುರುವ ಸಂಖ್ಯೆ ಕೂಡ ಕಡಿಮೆಯಾಗುತ್ತದೆ. ಇದರಲ್ಲಿರುವ ವಿಟಮಿನ್ ಬಿ ಕೂದಲಿಗೆ ಉತ್ತಮ ಪೋಷಣೆ ನೀಡುತ್ತದೆ.

* ಖರ್ಜೂರದಲ್ಲಿರುವ ವಿಟಮಿನ್ ಬಿ ಚರ್ಮದ ಕಲೆಗಳನ್ನು ನಿವಾರಿಸಲು ನೆರವಾಗುತ್ತದೆ. ವಿಶೇಷವಾಗಿ ಸ್ಟ್ರೆಚ್ ಮಾರ್ಕ್ಸ್ ಬೀಳುವುದನ್ನು ಕಡಿಮೆಗೊಳಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read