ಮೈಸೂರು: ದಸರಾ ನಾಡ ಹಬ್ಬ ಹಾಗಾಗಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಲಾಗಿದೆ ಎಂದು ಮುಖ್ಯಮಂತ್ರಿಬ್ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ದಸರಾ ನಾಡ ಹಬ್ಬವಾಗಿರುವುದರಿಂದ ಇಂಥವರೇ ಉದ್ಘಾಟನೆ ಮಾಡಬೇಕು ಅಂತೇನೂ ಇಲ್ಲ. ಎಲ್ಲರೂ ಸೇರಿ ದಸರಾವನ್ನು ಆಚರಣೆ ಮಾಡಬೇಕು ನಾಡ ಹಬ್ಬ ಎಲ್ಲರಿಗೂ ಸೇರಿದ್ದು ಎಂದು ಹೇಳಿದರು.
ಹೈದರಾಲಿ, ಟಿಪ್ಪು ದಸರಾ ಆಚರಣೆ ಮಾಡಿರಲಿಲ್ಲವೇ? ಮಿರ್ಜಾ ಇಸ್ಮಾಯಿಲ್ ದಿವಾನರಾಗಿರಲಿಲ್ಲವೇ? ಇದು ಧರ್ಮಾತೀತ ಹಾಗೂ ಜಾತ್ಯಾತೀತವಾದ ಹಬ್ಬ. ದಸರಾ ಸಾಂಸ್ಕೃತಿಕವಾಗಿ ಮಾಡುವ ನಾಡಹಬ್ಬ. ಹಾಗಾಗಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ರನ್ನು ದಸರಾ ಉದ್ಘಾತನೆಗೆ ಆಹ್ವಾನಿಸಲಾಗಿದೆ ಎಂದು ಹೇಳಿದರು.