ಬಳ್ಳಾರಿ ಜೈಲಿನ ಹೆಸರು ಕೇಳಿಯೇ ನಡುಗಿದ್ದ ನಟ ದರ್ಶನ್..! ಏನಿದೆ ಅಂತದ್ದು..?

ಬಳ್ಳಾರಿ : ಕೊನೆಗೂ ನಟ ದರ್ಶನ್ ಬಳ್ಳಾರಿ ಜೈಲು ಸೇರಿದ್ದು, ದಾಸನಿಗೆ ಇಂದಿನಿಂದ ಹೊಸ ಸೆರೆಮನೆ ವಾಸದ ಅನುಭವವಾಗಲಿದೆ.

ಬಳ್ಳಾರಿ ಜೈಲಿನ ಹೆಸರು ಕೇಳಿಯೇ ನಡುಗಿದ್ದ ದರ್ಶನ್

ನಟ ದರ್ಶನ್ ಏಳು ವರ್ಷಗಳ ಹಿಂದೆ ದರ್ಶನ್ ಬಳ್ಳಾರಿ ಜೈಲಿಗೆ ಹೀರೋ ಆಗಿ ಎಂಟ್ರಿ ಕೊಟ್ಟಿದ್ರು. ಹೌದು. ಅದು ಚೌಕ ಸಿನಿಮಾದ ಶೂಟಿಂಗ್ ಗಾಗಿ. ಈ ಚಿತ್ರದ ಫೈಟಿಂಗ್ ಸೀನ್ ನ್ನು ಬಳ್ಳಾರಿ ಜೈಲಿನಲ್ಲಿ ಶೂಟ್ ಮಾಡಲಾಗಿತ್ತು.ದರ್ಶನ್ ಚೌಕ ಸಿನಿಮಾದಲ್ಲಿ ಕೈದಿಯಾಗಿ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಕೂಡ ಆಗಿತ್ತು . ಇದೀಗ ಅದೇ ಜೈಲಿಗೆ ರಿಯಲ್ ಖೈದಿಯಾಗಿ ನಟ ದರ್ಶನ್ ಹೋಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅಂದರ್ ಆಗಿದ್ದ ದರ್ಶನ್ ಬಳ್ಳಾರಿ ಜೈಲಿಗೆ ಹೋಗಲು ಭಯಪಟ್ಟಿದ್ದರಂತೆ. ನಾನು ಬಳ್ಳಾರಿಗೆ ಹೋಗಲ್ಲ…ಇಲ್ಲೇ ಇರ್ತೀನಿ, ತುಂಬಾ ಕಷ್ಟ ಆಗುತ್ತೆ. ಇಲ್ಲೇ ಇರೋದಕ್ಕೆ ಅವಕಾಶ ಮಾಡಿಕೊಡಿ..ಎಂದು ದರ್ಶನ್ ಪೊಲೀಸರಿಗೆ ಕೇಳಿಕೊಂಡಿದ್ದರಂತೆ.

ಈ ಜೈಲು ಬಹಳ ಭಯಾನಕ ಸ್ಟೋರಿಯನ್ನು ಹೊಂದಿದ್ದು, ಇಲ್ಲಿ ಭಯಾನಕ ಕತ್ತಲು ಕೋಣೆಗಳಿದೆಯಂತೆ. ಅಲ್ಲದೇ ಈ ಜೈಲಿನಲ್ಲಿ ನೇಣುಗಂಬಕ್ಕೆ ಬಲಿಯಾದ ಖೈದಿಯ ಆತ್ಮಗಳ ನರಳಾಟ ಕೇಳಿಸುತ್ತದೆ ಎಂಬ ಸಿಬ್ಬಂದಿಗಳ ಕಟ್ಟುಕಥೆ ಕೂಡ ಖೈದಿಗಳನ್ನು ಹೆದರಿಸುತ್ತಿದೆ.

ನಟೋರಿಯಸ್ ರೌಡಿಗಳು. ಭೀಮಾತೀರದ ಹನುಮಂತ ನಾಯ್ಕ್, ಹುಲಿಹೈದರ್ ಗಲಭೆ, ಕೊಲೆ ಪ್ರಕರಣದ ಆರೋಪಿಗಳನ್ನೆಲ್ಲ ಇದೇ ಜೈಲಿನಲ್ಲಿ ಇರಿಸಲಾಗಿದೆ. ದೇಶದ ಕೆಲವು ಜೈಲಿನಲ್ಲಿ ನೇಣುಗಂಬದ ವ್ಯವಸ್ಥೆ ಇದೆ. ಇಂತಹ ವಿಶೇಷ ವ್ಯವಸ್ಥೆ ಬಳ್ಳಾರಿ ಜೈಲಿನಲ್ಲೂ ಕೂಡ ಇದೆ . ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಆರು ನೂರಕ್ಕೂ ಅಧಿಕ ಕೈದಿಗಳನ್ನು ಇರಿಸಬಹುದು. ಈಗಲೂ ಕೆಲವು ಕಟ್ಟಡಗಳು ಹಳೆಯ ಶೈಲಿಯಲ್ಲಿಯೇ ಇವೆ. ಇನ್ನು ಹೆಚ್ಚಿನ ಭದ್ರತೆ ಕೂಡ ಇಲ್ಲಿದೆ ಅಂತ ಹೇಳಲಾಗುತ್ತಿದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read