ದರ್ಶನ್ ನನ್ನು ಮದುವೆಯಾಗಲು ರೆಡಿ, ಅವರ ಹೆಂಡತಿಯಾಗಲು ಸಿದ್ಧಳಿದ್ದೇನೆ; ಬಳ್ಳಾರಿ ಜೈಲಿನ ಬಳಿ ಮಹಿಳೆಯ ಹುಚ್ಚಾಟ

ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದು, ಒಂದೆಡೆ ರೇಣುಕಾಸ್ವಾಮಿಗೆ ದರ್ಶನ್ ಹಾಗೂ ಗ್ಯಾಂಗ್ ನೀಡಿರುವ ಚಿತ್ರಹಿಂಸೆ ಫೋಟೋಗಳು ವೈರಲ್ ಆಗುತ್ತಿವೆ. ಇಷ್ಟಾಗ್ಯೂ ದರ್ಶನ್ ಮೇಲಿನ ಅಭಿಮಾನದ ಅತಿರೇಕ ಮಾತ್ರ ಫ್ಯಾನ್ಸ್ ಗೆ ಕಿಂಚಿತ್ತೂ ಕಡಿಮೆಯಾಗಿಲ್ಲ. ಅಭಿಮಾನವಿರಲಿ ಆದರೆ ಅತಿರೇಕದ ಅಭಿಮಾನದ ಹುಚ್ಚುತನ ನೋಡಿದರೆ ಸಮಾಜ ಯಾವ ದಿಕ್ಕಿನತ್ತ ಸಾಗುತ್ತಿದೆ? ಎಂದು ಬೇಸರವಾಗುತ್ತದೆ.

ಕೊಲೆ ಆರೋಪಿ ದರ್ಶನ್ ನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದರೂ ಅಲ್ಲಿಯೂ ಅಭಿಮಾನಿಗಳ ದಂಡೇ ಜೈಲಿನತ್ತ ಹರಿದುಬರುತ್ತಿದೆ. ಬಳ್ಳಾರಿ ಜೈಲಿನ ಬಳಿ ಬಂದು ದರ್ಶನ್ ಗಾಗಿ ಕಾಯುತ್ತಿರುವ ಮಹಿಳೆಯೊಬ್ಬಳು ನಾನು ದರ್ಶನ್ ನ ಅಭಿಮಾನಿ. ಅವರನ್ನು ಮದುವೆಯಾಗಿ, ಹೆಂಡತಿಯಾಗಿ ಇರಲು ನಾನು ರೆಡಿ ಇದ್ದೇನೆ ಎಂದು ಹುಚ್ಚು ಅಭಿಮಾನ ಮೆರೆದಿದ್ದಾರೆ.

ನಾನು ದರ್ಶನ್ ಭೇಟಿಗೆ ಬೆಂಗಳೂರು ಜೈಲು ಬಳಿಯೂ ಹೋಗಿದ್ದೆ. ಈಗ ಬಳ್ಳಾರಿ ಜೈಲಿಗೂ ಬಂದಿದ್ದೇನೆ. ಅವರಿಗಾಗಿ ಹಣ್ಣುಗಳನ್ನು ತಂದಿದ್ದೇನೆ. ಅವಕಾಶಕೊಟ್ಟರೆ ಅವರನ್ನು ಭೇಟಿಯಾಗಿ ಹೋಗುತ್ತೇನೆ. ಅವರಿಗೆ ಏನು ಊಟ-ತಿಂಡಿ-ತಿನಿಸು ಬೇಕು ಎಲ್ಲವನ್ನೂ ಮಾಡಿ ತರಲು ಸಿದ್ಧನಿದ್ದೇನೆ ಎಂದಿದ್ದಾಳೆ.

ಅಷ್ಟೇ ಅಲ್ಲ. ದರ್ಶನ್ ಗೆ ವಿಜಯಲಕ್ಷ್ಮೀ ಪತ್ನಿಯಾಗಿರಬಹುದು. ಆದರೂ ನಾನು ಕೂಡ ದರ್ಶನ್ ಮದುವೆಯಾಗಲು ರೆಡಿಯಿದ್ದೇನೆ. ಅವರ ಪತ್ನಿಯಾಗಲು ಇಷ್ಟಪಡುತ್ತೇನೆ. ಅವರ ಮೇಲೆ ಅಷ್ಟು ಅಭಿಮಾನ ಹೊಂದಿದ್ದೇನೆ ಎಂದಿದ್ದಾಳೆ ಮಹಿಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read