BIG NEWS: ದರ್ಶನ್ ಪ್ರಕರಣ: ಯಾರೂ ಮಧ್ಯಪ್ರವೇಶ ಮಾಡಿಲ್ಲ; ಅವಶ್ಯಕತೆಯೂ ಯಾರಿಗೂ ಇಲ್ಲ ಎಂದ ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ನಟ ದರ್ಶನ್ ಕೇಸ್ ವಿಚಾರದಲ್ಲಿ ಸಚಿವರಿಗೆ ಸಿಎಂ ಸೂಚನೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಅಧಿಕಾರಿಗಳು ಬಿಟ್ಟರೆ ಯಾರೂ ಇದರಲ್ಲಿ ಮಧ್ಯಪ್ರವೇಶ ಮಾಡಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ದರ್ಶನ್ ಕೇಸ್ ನಲ್ಲಿ ಯಾರೂ ಮಧ್ಯಪ್ರವೇಶ ಮಾಡಿಲ್ಲ. ಅದರ ಅವಶ್ಯಕತೆ ಯಾರಿಗೂ ಇಲ್ಲ. ನಾನು ಅಥವಾ ಸಿಎಂ ಯಾರೂ ಕೂಡ ಮಧ್ಯಪ್ರವೇಶ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಶಾಸಕರ ಸಂಬಂಧಿ ಪ್ರಕರಣದಲ್ಲಿ ಭಾಗಿ ಎಂಬ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ಪಕ್ಷದ ಆಧಾರದ ಮೇಲೆ ಈ ಕೇಸ್ ನ್ನು ನೋಡುತ್ತಿಲ್ಲ. ಒಂದು ವೇಳೆ ನಮ್ಮ ಪಕ್ಷದವರು ಇದ್ದರೂ ತಪ್ಪಿತಸ್ಥರೇ. ಬೇರೆ ಪಕ್ಷದಲ್ಲಿ ಇದ್ದರೂ ತಪ್ಪಿತಸ್ಥರೇ. ಯಾರು ಏನು ತಪ್ಪು ಮಾಡಿದ್ದಾರೆ ಅದರ ಮೇಲೆ ಕ್ರಮವಾಗುತ್ತದೆ ಎಂದು ಹೇಳಿದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read