ಬೆಂಗಳೂರು: ನಟ-ನಟಿಯರು, ಸೆಲೆಬ್ರೆಟಿಗಳು ಫ್ಯಾಮಿಲಿ ಕೋರ್ಟ್ ಆವರಣದಲ್ಲಿ ಕಾಣಿಸಿಕೊಂಡರೆ ಅಭಿಮಾನಿಗಳು ಹುಬ್ಬೇರಿಸುವುದು ಸಹಜ. ಇದೀಗ ಸ್ಯಾಂಡಲ್ ವುಡ್ ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ಹಾಗೂ ಪತ್ನಿ ಮಿಲನಾ ನಾಗರಾಜ್ ಫ್ಯಾಮಿಲಿ ಕೋರ್ಟ್ ನಲ್ಲಿ ಕಾಣಿಸಿಕೊಂಡಿದ್ದು, ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ.
ಫ್ಯಾಮಿಲಿ ಕೋರ್ಟ್ ನಲ್ಲಿ ಸಾಮಾನ್ಯ ಜನರೇ ಆಗಲಿ, ಸೆಲೆಬ್ರಿಟಿಗಳೇ ಆಗಲಿ ಕಾಣಿಸಿಕೊಂಡರೇ ವಿಚ್ಛೇದನದ ಬಗ್ಗೆ ಗುಸುಗುಸು ಆರಂಭವಾಗಿಯೇಬಿಡುತ್ತದೆ. ಆದರೆ ನಟ ಡಾರ್ಲಿಂಗ್ ಕೃಷ್ಣ ಕೌಟುಂಬಿಕ ನ್ಯಾಯಾಲಯದಲ್ಲಿ ಕಾಣಿಸಿಕೊಂಡಿದ್ದು, ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಡುವೆ ಏನಾಯಿತು ಎಂದು ಜನರು ಒಂದು ಕ್ಷಣ ಶಾಕ್ ಆಗುವಂತಾಗಿದೆ. ಆದರೆ ಕೃಷ್ಣ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಲಿ ಅಸಲಿ ಕಾರಣವೇ ಬೇರೆ ಇದೆ.
ಡಾರ್ಲಿಂಗ್ ಕೃಷ್ಣ ಮಾಸ್ಕ್ ಧರಿಸಿ ಫ್ಯಾಮಿಲಿ ಕೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಗುರುತು ಸಿಗಬಾರದೆಂದು ಮಾಸ್ ಧರಿಸಿದ್ದರೂ ಅವರು ಡಾರ್ಲಿಂಗ್ ಕೃಷ್ಣ ಎಂಬುದು ಗೊತ್ತಾಗಿದೆ. ಡಾರ್ಲಿಂಗ್ ಕೃಷ್ಣ ಕೋರ್ಟ್ ನಲ್ಲಿ ಕಾಣಿಸಿಕೊಂಡಿರುವುದು ಸಿನಿಮಾ ವಿಚಾರಕ್ಕೆ ಎನ್ನಲಾಗಿದೆ.
ಡಾರ್ಲಿಂಗ್ ಕೃಷ್ಣ ನಟನಾಗಿ, ನಿರ್ದೇಶಕನಾಗಿ ‘ಲವ್ ಮಾಕ್ಟೇಲ್’ ಸಿನಿಮಾ ಮಾಡಿದ್ದಾರೆ. ಲವ್ ಮಾಕ್ಟೇಲ್, ಲವ್ ಮಾಕ್ಟೇಲ್ -2 ಸಿನಿಮಾ ನಿರ್ದೇಶನ ಮಾಡಿದ್ದಲ್ಲದೇ ಕೃಷ್ಣ ಹಾಗೂ ಮಿಲನಾ ಅವರೇ ಸಿನಿಮಾಗೆ ಬಂಡವಾಳವನ್ನೂ ಹೂಡಿದ್ದರು. ಇದೀಗ ಲವ್ ಮಾಕ್ಟೇಲ್-೩ ಕೂಡ ಸಿದ್ಧವಾಗುತ್ತಿದೆ. ಈ ಚಿತ್ರದಲ್ಲಿ ಫ್ಯಾಮಿಲಿ ಕೋರ್ಟ್ ನ ದೃಶ್ಯಗಳು ಇರುತ್ತವಂತೆ. ಅದೇ ಕಾರನಕ್ಕೆ ಕೌಟುಂಬಿಕ ನ್ಯಾಯಾಲಯ ಹೇಗಿರುತ್ತದೆ ಎಂಬುದನ್ನು ನೋಡಲು ಸ್ವತಃ ಡಾರ್ಲಿಂಗ್ ಕೃಷ್ಣ ಕೋರ್ಟ್ ಗೆ ತೆರಳಿ ವೀಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.