ಹಳಿತಪ್ಪಿದ ಪ್ರವಾಸಿಗರ ಮೋಜಿನ ರೈಲು; ಕುಳಿತಿದ್ದವರು ಕಂಗಾಲು !

ಪ್ರವಾಸಿಗರ ಮೋಜಿಗೆಂದು ಇರುವ ಆಟದ ರೈಲು ಡಾರ್ಜಿಲಿಂಗ್ ನಲ್ಲಿ ಹಳಿ ತಪ್ಪಿದ ಘಟನೆ ವರದಿಯಾಗಿದೆ. ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇಸ್‌ ( ಡಿಹೆಚ್ ಆರ್) ನ ಸ್ಟೀಮ್ ಲೊಕೊ ರೈಲು ಡಾರ್ಜಿಲಿಂಗ್‌ನ ಮೇರಿ ವಿಲ್ಲಾ ಕಾಕ್‌ಜೋರಾದಲ್ಲಿ ಹಳಿ ತಪ್ಪಿದೆ.

ಡಿಎಚ್‌ಆರ್ ಲೊಕೊ ಹಳಿ ತಪ್ಪಿದ್ದು ಇದು ಮೂರನೇ ಬಾರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ರೈಲನ್ನು ಮತ್ತೆ ಟ್ರ್ಯಾಕ್‌ನಲ್ಲಿ ಇರಿಸುವ ಕೆಲಸ ನಡೆಯುತ್ತಿವೆ.

“ಸೋಮವಾರ ಮಧ್ಯಾಹ್ನ ಡಾರ್ಜಿಲಿಂಗ್ ಮತ್ತು ಘುಮ್ ನಡುವೆ ಮೋಜಿನ ಸಂಚಾರ ಸೇವೆಯ ಸ್ಟೀಮ್ ಇಂಜಿನ್ ಹಳಿತಪ್ಪಿತು. ಎರಡು ಬೋಗಿಗಳಲ್ಲಿ 59 ಪ್ರಯಾಣಿಕರಿದ್ದರು. ಆದರೆ ಯಾರಿಗೂ ಗಾಯಗಳಾಗಿಲ್ಲ. ರಿಕವರಿ ವ್ಯಾನ್ ಸ್ಥಳಕ್ಕೆ ತಲುಪಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಸಂಭವಿಸಿದ ಘಟನೆಯಿಂದ ಪ್ರವಾಸಿಗರು ಭಯಭೀತರಾಗಿದ್ದರು.

ಡಿ ಹೆಚ್ ಆರ್ 12 ಮೋಜಿನ ಸಂಚಾರ ಸೇವೆಗಳನ್ನು ಒದಗಿಸುತ್ತಿದ್ದು ಎಲ್ಲವನ್ನೂ ಜನವರಿ 1 ರವರೆಗೆ ಕಾಯ್ದಿರಿಸಲಾಗಿದೆ. ಆದಾಗ್ಯೂ ಬೆಟ್ಟಗಳಲ್ಲಿ ಪ್ರವಾಸಿಗರ ಸಂಖ್ಯೆ ಕ್ರಮೇಣ ಕಡಿಮೆಯಾಗುವುದರಿಂದ ಜನವರಿ 5 ರೊಳಗೆ ಸೇವೆಗಳನ್ನು ಕಡಿಮೆಗೊಳಿಸಲಾಗುತ್ತದೆ. ಒಟ್ಟು ಎಂಟು ಸೇವೆಗಳಲ್ಲಿ ನಾಲ್ಕು ರೈಲು ಡೀಸೆಲ್ ಎಂಜಿನ್ ಮತ್ತು ನಾಲ್ಕು ಸ್ಟೀಮ್ ಮೂಲಕ ಸೇವೆ ಒದಗಿಸಲಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read