ಡಾರ್ಜಿಲಿಂಗ್: ಡಾರ್ಜಿಲಿಂಗ್ ನಲ್ಲಿ ಸಂಭವಿಸಿದ ಭೀಕರ ಪ್ರವಾಹ, ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.
ಭಾರಿ ಮಳೆಯಿಂದಾಗಿ ಪ್ರವಾಹವುಂಟಾಗಿದ್ದು, ಭೂಕುಸಿತ ಸಂಭವಿಸಿದೆ. ಘಟನೆಯಲ್ಲಿ 23 ಜನರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸರ್ವಾಲಿ, ಜಸ್ಟೀರ್ ಗಾಂವ್, ನಾಗರಕಟಾ, ಮಿರಿಕ್ ಬಸ್ತಿ, ಧಾರಗಾಂವ್, ಮೀರಕ್ ಲೇಕ್ ಪ್ರದೇಶಗಳಲ್ಲಿ ಜನರು ಸಾವನ್ನಪ್ಪಿದ್ದಾರೆ.
12 ಗಂಟೆಯಲ್ಲಿ 300 ಮಿ.ಮೀ ಮಳೆಯಾದ ಪರಿಣಾಮ ಪ್ರವಾಹದಿಂದಾಗಿ ಭೂಕುಸಿತವಾಗಿದೆ. ಘಟನಾ ಸ್ಥಳದಲ್ಲಿ ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಇನ್ನು ಧಾರಗಾಂವ್ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕಟ್ಟಡಗಳ ಕೆಳಗೆ ಸಿಲುಕಿದ್ದ ೪೦ ಜನರನ್ನು ರಕ್ಷಿಸಲಾಗಿದೆ.
ಬಂಗಾಳ-ಸಿಕ್ಕಿಂ, ಡಾರ್ಜಿಲಿಂಗ್-ಸಿಲಿಗುರಿ ಸೇರಿದಂತೆ ಹಲವೆಡೆ ಭೂಕುಸಿತದಿಂದಾಗಿ ಸಂಪರ್ಕ ಮಾರ್ಗವೇ ಕಡಿತಗೊಂಡಿದೆ.