ಐಪಿಎಲ್‌: 2015 ರಲ್ಲೇ ಕಪ್ ಗೆದ್ದಿದ್ದ ಮಿ. ನಾಗ್ಸ್‌…….!

’ಈ ಸಲ ಕಪ್ ನಮ್ದೇ’ ಎಂದು ಹೇಳಿಕೊಂಡು ಪ್ರತಿ ಬಾರಿ ಐಪಿಎಲ್‌ ಕಣಕ್ಕಿಳಿಯುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಮ್ಮೆಯೂ ಕಪ್ ಗೆಲ್ಲದೇ ಇದ್ದರೂ ಸಹ ಅಭಿಮಾನಿಗಳ ಉತ್ಸಾಹಕ್ಕೇನೂ ಕಡಿಮೆ ಇಲ್ಲ. ಆರ್‌ಸಿಬಿಯ ಆಟದಷ್ಟೇ ಮನರಂಜನೆ ಕೊಡುವ ’ಆರ್‌ಸಿಬಿ ಇನ್ಸೈಡರ್‌’ ಖ್ಯಾತಿಯ ಡ್ಯಾನಿಶ್ ಸೇಠ್‌ ಅಲಿಯಾಸ್ ಮಿಸ್ಟರ್‌ ನೋಗ್ರಾಜ್‌ ತಮ್ಮ ವಿನೋದಮಯ ಕಂಟೆಂಟ್‌ನಿಂದಾಗಿ ’ಕಂಟೆಂಟ್‌ ಕಿಂಗ್‌’ ಎಂದೇ ಜನಪ್ರಿಯರಾಗಿದ್ದಾರೆ.

ತಂಡ ಹೀನಾಯ ಸೋಲು ಕಂಡಾಗಲೂ ತಮ್ಮ ಹಾಸ್ಯಪ್ರಜ್ಞೆಯಿಂದ ಅದರಲ್ಲೂ ಹಾಸ್ಯ ಮಾಡಿ ನಿರಾಶರಾಗಿದ್ದ ಅಭಿಮಾನಿಗಳ ಮೊಗದಲ್ಲಿ ನಗು ಮೂಡಿಸುವ ಮಿ. ನಾಗ್ಸ್‌ರ 2015ರ ಫೋಟೋವೊಂದು ವೈರಲ್ ಆಗಿದೆ.

ವಿಮಾನದಲ್ಲಿ ಪ್ರಯಾಣಿಸುವ ವೇಳೆ 2015ರ ಆವೃತ್ತಿಯ ಐಪಿಎಲ್ ಟ್ರೋಫಿಯನ್ನು ಕೈಯಲ್ಲಿ ಹಿಡಿದಿದ್ದ ಮಿ. ನಾಗ್ಸ್‌ ತಮ್ಮದೇ ತಮಾಷೆಯ ಶೈಲಿಯಲ್ಲಿ ಮಾತನಾಡುತ್ತಾ, “ನಮಗೆ ಅದಾಗಲೇ ಟ್ರೋಫಿ ಸಿಕ್ಕಿರುವಾಗ ನಾವು ಆಟವನ್ನಾದರೂ ಏಕೆ ಆಡಬೇಕು?” ಎಂದಿದ್ದರು.

ಐಪಿಎಲ್‌ ಆರಂಭಗೊಳ್ಳಲು ಕ್ಷಣಗಣನೆಯಾಗುತ್ತಿರುವ ವೇಳೆಯಲ್ಲಿ ಮಿ. ನಾಗ್ಸ್‌ರ ಈ ಚಿತ್ರ ಆರ್‌ಸಿಬಿ ತಂಡದ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ವೈರಲ್ ಆಗಿದೆ.

ಆರ್‌ಸಿಬಿ ಅನ್‌ಬಾಕ್ಸಿಂಗ್‌ ಕಾರ್ಯಕ್ರಮದಲ್ಲಿ ತಮಾಷೆ ಮಾಡುತ್ತಿದ್ದ ವೇಳೆ ಕ್ರಿಸ್ ಗೇಲ್, ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್‌ರೊಂದಿಗೆ ವಿನೋದಮಯ ಸಂಭಾಷಣೆಯಲ್ಲಿ ತೊಡಗಿದ್ದ ಮಿ. ನಾಗ್ಸ್‌, “ಆರ್‌ಸಿಬಿ ತಂಡದಲ್ಲಿ ತಾವೂ ಸಹ ವಿರಾಟ್, ಗೇಲ್ ಹಾಗೂ ಡಿವಿಲಿಯರ್ಸ್‌ರಂತೆ ಲೆಜೆಂಡ್‌,” ಎಂದು ಹೇಳಿಕೊಂಡು ವಿನೋದದಲ್ಲಿ ತೊಡಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read