ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಬೀದಿನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ವೈದ್ಯಾಧಿಕಾರಿ, ಮಗು ಸೇರಿದಂತೆ ಐವರ ಮೇಲೆ ಬೀದಿ ನಾಯಿ ದಾಳಿ ನಡೆಸಿದೆ.
ದಾಂಡೇಲಿ ತಾಲೂಕು ಟಿಹೆಚ್ ಒ ಹಾಗೂ ಮಹಿ, ಮಗು ಸೇರಿ ಒಂದೇ ದಿನ ಐವರ ಮೇಲೆ ಬೀದಿ ನಾಯಿ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದೆ. ವೈಷ್ಣವಿ, ಹಜರತ್, ರೋಜಿ, ಪೆಟ್ರಿನಾ, ನಾಗಮ್ಮ ಸೇರಿದಂತೆ ಐಅವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ನಾಲ್ಕು ದಿನಗಳಲ್ಲಿ ದಾಂಡೇಲಿಯಲ್ಲಿ ಬೀದಿನಾಯಿಗಳ ದಾಳಿಗೆ ಹತ್ತು ಜನರು ಗಾಯಗೊಂಡಿದ್ದಾರೆ. ದಾಂಡೇಲಿಯಲ್ಲಿ 2000ಕ್ಕೂ ಹೆಚ್ಚು ಬೀದಿನಾಯಿಗಳಿದ್ದು, ಪ್ರತಿದಿನ ಬೀದಿ ನಾಯಿಗಳ ದಾಳಿಗೆ ಹಲವರು ಹೈರಾಣಾಗುತ್ತಿದ್ದರೂ ನಗರಸಭೆ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ.
