ಟಿಬೆಟಿಯನ್ ಧರ್ಮಗುರು ದಲೈ ಲಾಮಾಗೆ ಜೀವ ಬೆದರಿಕೆ ಹಿನ್ನಲೆ Z ಕೆಟಗರಿ ಭದ್ರತೆ

ನವದೆಹಲಿ: ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರಿಗೆ ಭಾರತದಾದ್ಯಂತ Z-ಕೆಟಗರಿ ಕೇಂದ್ರ ಮೀಸಲು ಪೊಲೀಸ್ ಪಡೆ ಭದ್ರತೆಯನ್ನು ಗೃಹ ಸಚಿವಾಲಯ(MHA) ನೀಡಿದೆ.

89 ವರ್ಷದ ದಲೈ ಲಾಮಾ ರಕ್ಷಣೆಗೆ CRPF ವಿಐಪಿ ಭದ್ರತಾ ವಿಭಾಗವು ಜವಾಬ್ದಾರವಾಗಿರುತ್ತದೆ. ದಲೈ ಲಾಮಾ ಅವರಿಗೆ Z-ಕೆಟಗಿ ರಕ್ಷಣೆ ನೀಡಲಾಗುವುದು, CRPF ಕಮಾಂಡೋಗಳು ದೇಶಾದ್ಯಂತ ಅವರ ಭದ್ರತೆ ನೀಡುತ್ತಾರೆ.

ಪಾಳಿಯಲ್ಲಿ 30 CRPF ಕಮಾಂಡೋಗಳ ಕೆಲಸ

ದಲೈ ಲಾಮಾ ಅವರಿಗೆ ಹಿಮಾಚಲ ಪ್ರದೇಶ ಪೊಲೀಸರಿಂದ ರಕ್ಷಣೆ ಇದೆ. ಅವರು ದೆಹಲಿ ಅಥವಾ ಯಾವುದೇ ಇತರ ಸ್ಥಳಕ್ಕೆ ಪ್ರಯಾಣಿಸಿದಾಗ ಸ್ಥಳೀಯ ಪೊಲೀಸರು ಭದ್ರತೆಯನ್ನು ನೀಡುತ್ತಾರೆ.

ಕೇಂದ್ರ ಗುಪ್ತಚರ ಸಂಸ್ಥೆಗಳ ಪರಿಶೀಲನೆಯ ನಂತರ ಸರ್ಕಾರ ಈಗ ಅವರಿಗೆ ಏಕರೂಪದ ಭದ್ರತಾ ರಕ್ಷಣೆಯನ್ನು ನೀಡಿದೆ. ದಲೈ ಲಾಮಾ ಅವರನ್ನು ರಕ್ಷಿಸಲು ಸುಮಾರು 30 CRPF ಕಮಾಂಡೋಗಳ ತಂಡವು ಪಾಳಿಯಲ್ಲಿ ಕೆಲಸ ಮಾಡುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read