ನಂದಮೂರಿ ಬಾಲಕೃಷ್ಣ ಅಭಿನಯದ ಬಹುನಿರೀಕ್ಷಿತ ‘ಡಾಕು ಮಹಾರಾಜ್’ ನಾಳೆ ತೆರೆ ಮೇಲೆ ಬರಲಿದ್ದು, ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ನಂದಮೂರಿ ಬಾಲಕೃಷ್ಣ ಅವರ ಬ್ಯಾಕ್ ಟು ಬ್ಯಾಕ್ ಚಿತ್ರಗಳು ಸೂಪರ್ ಡೂಪರ್ ಹಿಟ್ ಆಗಿದ್ದು, ‘ಡಾಕು ಮಹಾರಾಜ್’ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ.
ಈ ಚಿತ್ರವನ್ನು ಬಾಬಿ ಕೊಲ್ಲಿ ನಿರ್ದೇಶಿಸಿದ್ದು, ನಂದಮೂರಿ ಬಾಲಕೃಷ್ಣ ಸೇರಿದಂತೆ ಬಾಬಿ ಡಿಯೋಲ್, ಪ್ರಜ್ಞಾ ಜೈಸ್ವಾಲ್, ಶ್ರದ್ಧಾ ಶ್ರೀನಾಥ್, ಚಾಂಧಿನಿ ಚೌಧರಿ. ಪಾಯಲ್ ರಜಪೂತ್, ದುಲ್ಕರ್ ಸಲ್ಮಾನ್, ಪ್ರಕಾಶ್ ರಾಜ್, ತೆರೆ ಹಂಚಿಕೊಂಡಿದ್ದಾರೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಹಾಗೂ ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್ ನಲ್ಲಿ ನಾಗ ವಂಶಿ ಎಸ್ ಮತ್ತು ಸಾಯಿ ಸೌಜನ್ಯ ನಿರ್ಮಾಣ ಮಾಡಿದ್ದು, ಥಮನ್ ಎಸ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಭಾನು-ನಂದು ಸಂಭಾಷಣೆ, ನಿರಂಜನ್ ದೇವರಮನೆ ಸಂಕಲನ, ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣವಿದೆ.