ನಂದಮೂರಿ ಬಾಲಕೃಷ್ಣ ಅಭಿನಯದ ಬಾಬಿ ಕೊಲ್ಲಿ ನಿರ್ದೇಶನದ ‘ಡಾಕು ಮಹಾರಾಜ್’ ಜನವರಿ 12 ರಂದು ತೆರೆಕಂಡಿತ್ತು ಈ ಚಿತ್ರಕ್ಕೆ ಅಂದುಕೊಂಡಂತೆ ಭರ್ಜರಿಯ ಯಶಸ್ಸು ಸಿಕ್ಕಿದ್ದು ಬಾಕ್ಸ್ ಆಫೀಸ್ ನಲ್ಲಿ ದೂಳೆಬ್ಬಿಸಿದೆ. ಪ್ರೇಕ್ಷಕರಿಂದ ಮೆಚ್ಚುಗೆಯ ಸುರಿಮಳೆಯೇ ಹರಿದು ಬಂದಿದ್ದು, ಇತ್ತೀಚಿಗಷ್ಟೇ ಚಿತ್ರತಂಡ ಸಕ್ಸೆಸ್ ಮೀಟ್ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಈ ಚಿತ್ರವನ್ನು ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್ ನಲ್ಲಿ ನಾಗ ವಂಶಿ ಎಸ್ ಮತ್ತು ಸಾಯಿ ಸೌಜನ್ಯ ನಿರ್ಮಾಣ ಮಾಡಿದ್ದು, ನಂದಮೂರಿ ಬಾಲಕೃಷ್ಣ ಸೇರಿದಂತೆ ಬಾಬಿ ಡಿಯೋಲ್, ಪ್ರಜ್ಞಾ ಜೈಸ್ವಾಲ್, ಶ್ರದ್ಧಾ ಶ್ರೀನಾಥ್, ಚಾಂಧಿನಿ ಚೌಧರಿ. ತೆರೆ ಹಂಚಿಕೊಂಡಿದ್ದಾರೆ. ಥಮನ್ ಎಸ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ನಿರಂಜನ್ ದೇವರಮನೆ, ರೂಬೆನ್ ಸಂಕಲನ, ಭಾನು-ನಂದು ಸಂಭಾಷಣೆ, ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣವಿದೆ.