BIG NEWS: ಯಾತ್ರಾರ್ಥಿಗಳಿಗೆ ಗುಡ್ ನ್ಯೂಸ್: ರಾಜ್ಯ ಧಾರ್ಮಿಕ ದತ್ತಿ ಇಲಾಖೆಯಿಂದ ದಕ್ಷಿಣ ಯಾತ್ರಾ ಯೋಜನೆ ಜಾರಿ; ಟಿಕೆಟ್ ಬುಕ್ಕಿಂಗ್ ಆರಂಭ

ಬೆಂಗಳೂರು: ರಾಜ್ಯ ಧಾರ್ಮಿಕ ದತ್ತಿ ಇಲಾಖೆಯಿಂದ ದಕ್ಷಿಣ ಯಾತ್ರಾ ಯೋಜನೆ ಆರಂಭವಾಗಿದ್ದು, ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಲು ಸಬ್ಸಿಡಿ ದರದಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದೆ.

ದಕ್ಷಿಣ ಯಾತ್ರಾ ಯೋಜನೆಯ ಆನ್ ಲೈನ್ ಟಿಕೆಟ್ ಬುಕಿಂಗ್ ಆರಂಭವಾಗಿದೆ. ಯಾತ್ರಾರ್ಥಿಗಳಿಗೆ ಸಬ್ಸಿಡಿ ಆಫರ್ ಕೂಡ ನೀಡಲಾಗಿದೆ. ಯಾತ್ರಾರ್ಥಿಕರು IRTC ರೈಲ್ವೆ ಆಪ್ ಮೂಲಕ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಬಹುದು.

ಮೊದಲ ಹಂತದಲ್ಲಿ ಎರಡು ರೈಲುಗಳಲ್ಲಿ ದಕ್ಷಿಣ ಯಾತ್ರೆ ನಡೆಯಲಿದೆ. ಒಟ್ಟು ಆರು ದಿನಗಲ ಕಾಲ ದಕ್ಷಿಣ ಭಾರತದಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳಗಳನ್ನು ನೋಡಲು ಅವಕಾಶ ಕಲ್ಪಿಸಲಾಗಿದೆ. ಈ ಯಾತ್ರೆಗೆ 15,000 ರೂಪಾಯಿ ಟಿಕೆಟ್ ಆಗಲಿದ್ದು, ರಾಜ್ಯ ಸರ್ಕಾರ 5,000 ರೂಪಾಯಿ ಸಬ್ಸಿಡಿ ನೀಡುತ್ತದೆ. ಯಾತ್ರಿಕರು 10,000 ರೂಪಾಯಿ ಮಾತ್ರ ಪಾವತಿಸಬೇಕು.

ಜನವರಿ 18ರಂದು ದಕ್ಷಿಣ ಯಾತ್ರೆ ಮೊದಲ ರೈಲು ಹೊರಡಲಿದೆ. ಜನವರಿ 30ರಂದು ಎರಡನೇ ರೈಲು ಹೊರಡಲಿದೆ. ದಕ್ಷಿಣ ಕ್ಷೇತ್ರ ಯಾತ್ರೆ ವೇಳೆ ಪ್ರಯಾಣಿಕರಿಗೆ ಅನಾರೋಗ್ಯದಂತಹ ಸಮಸ್ಯೆ ಕಾಣಿಕೊಂಡಲ್ಲಿ ಚಿಕಿತ್ಸೆಗಾಗಿಯೂ ವಿಶೇಷ ವೈದ್ಯಕೀಯ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಯಾತ್ರಾರ್ಥಿಗಳು ದಕ್ಷಿಣ ಯಾತ್ರೆ ಯೋಜನೆಯಡಿ ರಾಮೇಶ್ವರ, ಕನ್ಯಾಕುಮಾರಿ, ಮದುರೈ ಹಾಗೂ ತಿರುವನಂತಪುರಂನಲ್ಲಿರುವ ತೀರ್ಥ ಕ್ಷೇತ್ರಗಳನ್ನು ನೋಡಬಹುದು. ಯಾತ್ರಿಕರು ಬೆಳಗಾವಿ, ಹುಬ್ಬಳ್ಳಿ, ಬೀರೂರು, ಹಾವೇರಿ, ಉಮಕೂರು, ದಾವಣಗೆರೆ, ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣಗಳ ಮೂಲಕ ರೈಲು ಹತ್ತಬಹುದಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read