ನೆಲ ಅಗಿಯುವಾಗ ಸಿಕ್ಕ ನಿಧಿಯನ್ನು ಪ್ರಾಮಾಣಿಕವಾಗಿ ಪೊಲೀಸರಿಗೊಪ್ಪಿಸಿದ ದಿನಗೂಲಿ ಕಾರ್ಮಿಕ….!

ಮಧ್ಯ ಪ್ರದೇಶದ ದಾಮೋಹ್ ಜಿಲ್ಲೆಯ ಯುವ ಕಾರ್ಮಿಕರೊಬ್ಬರಿಗೆ ಕಳೆದ 136 ವರ್ಷಗಳಿಂದ ಭೂಮಿಯೊಳಗೆ ಬಚ್ಚಿಡಲಾಗಿದ್ದ 240 ಬೆಳ್ಳಿ ನಾಣ್ಯಗಳು ಸಿಕ್ಕಿವೆ. ಈ ನಾಣ್ಯಗಳನ್ನು ತನ್ನ ಮನೆಗೊಯ್ದ ಈತ, ರಾತ್ರಿಯೆಲ್ಲಾ ನಿದ್ರೆ ಬಾರದೇ ಇದ್ದ ಕಾರಣ, ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಅವುಗಳನ್ನು ಒಪ್ಪಿಸಿದ್ದಾರೆ.

ಹಲ್ಲೇ ಅಹಿರ್ವಾರ್‌ ಹೆಸರಿನ ಈ ದಿನಗೂಲಿ ಕಾರ್ಮಿಕನ ಪ್ರಾಮಾಣಿಕತೆಯನ್ನು ಪೊಲೀಸರು ಮೆಚ್ಚಿಕೊಂಡಿದ್ದಾರೆ. 1887ರಲ್ಲಿ ಟಂಕಿಸಲಾದ ಈ ನಾಣ್ಯಗಳು ರಾಜರ ಕಾಲದವಾಗಿದ್ದು, ಅವುಗಳ ಬೆಲೆಯನ್ನು ತಿಳಿಯಲು ಯತ್ನಿಸಿದ್ದಾರೆ ಪೊಲೀಸರು.

ಮನೆಯೊಂದರ ತಳಪಾಯಕ್ಕೆಂದು ಗುಂಡಿಗಳನ್ನು ತೋಡುತ್ತಿದ್ದ ವೇಳೆ ಅಹಿರ್ವಾರ್‌ಗೆ ಈ ನಾಣ್ಯಗಳ ಗಂಟು ಸಿಕ್ಕಿದೆ. ಕೇವಲ ಬೆಳ್ಳಿಯ ತೂಕದ ಮೇಲೆ ಹೋದರೂ ಈ ನಾಣ್ಯಗಳು 1.92 ಲಕ್ಷ ರೂ.ಗಳಷ್ಟು ಬೆಲೆ ಬಾಳುತ್ತವೆ.

ಮನೆಯ ತಳಪಾಯದ ಕೆಲಸವನ್ನು ಸದ್ಯದ ಮಟ್ಟಿಗೆ ನಿಲ್ಲಿಸಲಾಗಿದ್ದು, ಪ್ರಾಚ್ಯ ವಸ್ತು ಹಾಗೂ ಖನಿಜಗಳ ಇಲಾಖೆಗಳಿಗೆ ವಿಚಾರ ಮುಟ್ಟಿಸಿರುವ ಪೊಲೀಸರು ಸ್ಥಳದ ಮಹಜರು ಮಾಡಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read