ಬೆಂಗಳೂರು: ನಾಯಕತ್ವ ಬದಲಾವಣೆ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಮಾತನಾಡಿದ್ದೀವಿ ಅದು ಮಾತ್ರ ಮಾತು. ಅದನ್ನು ಬಿಟ್ಟರೆ ಬೇರೆ ಯಾರ ಮಾತಿಗೂ ಇಲ್ಲಿ ಕಿಮ್ಮತ್ತಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಾವು ಒಮ್ಮತದಿಂದ ಇರುವುದಕ್ಕೆ ಇಂದು 141ರವರೆಗೂ ತಲುಪಿದ್ದೇವೆ. ಯಾರು ಏನೇ ಹೇಳಿಕೆಗಳನ್ನು ನೀಡಿದರೂ ಅದಕ್ಕೆ ಉತ್ತರಿಸಬೇಕಿಲ್ಲ. ನಾನು ಹಾಗೂ ಸಿಎಂ ಏನು ಮಾತನಾಡಿದ್ದೇವೆ ಅದು ಮಾತ್ರ ಮಾತು ಎಂದು ಹೇಳಿದರು.
