ಬೆಂಗಳೂರು: ಕಾಂಗ್ರೆಸ್ ನಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಯಾಗಲಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಎಲ್ಲಾ ಬೋಗಸ್ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಯಾವ ಬದಲಾವಣೆಯೂ ಆಗಲ್ಲ, ಎಲ್ಲಾ ಬೋಗಸ್. ಬಿಜೆಪಿಯಲ್ಲಿಯೇ ಅವರ ಮನೆ ಒಡೆದಿದೆ. ನಾವು ಗಟ್ಟಿಯಾಗಿದ್ದೇವೆ ಎಂದು ಹೇಳಿದರು.
ಬಿಜೆಪಿಯಲ್ಲಿಯೇ ಒಡಕುಂಟಾಗಿದೆ. ಮೊದಲು ಅವರ ಒಡೆದ ಮನೆ ಸರಿಪಡಿಸಿಕೊಳ್ಳಲಿ. ಕಾಂಗ್ರೆಸ್ ಬಗ್ಗೆ ಅವರ ಚಿಂತೆ ಬೇಡ. ಯಾವ ಬಾದಲಾವಣೆಯೂ ಆಗಲ್ಲ ಎಲ್ಲವೂ ಬಿಜೆಪಿ ನಾಯಕರ ಹೇಳಿಕೆಯಷ್ಟೇ ಎಂದು ಹೇಳಿದರು.