ಬೆಂಗಳೂರು: ಬಿಜೆಪಿಯಿಂದ ಆಫರ್ ಬಂದಿತ್ತು. ಡಿಸಿಎಂ ಹುದ್ದೆ ಬೇಕೋ? ಜೈಲುವಾಸ ಬೇಕೋ? ಎಂದು ದೆಹಲಿಯಿಂದ ಕರೆ ಮಾಡಿದ್ದರು. ಪಕ್ಷ ನಿಷ್ಠೆಗಾಗಿ ಜೈಲಿಗೆ ಹೋಗಿದ್ದೆ ಎಂದು ಹೇಳಿಕೆ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದೆ.
ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಆರ್.ಅಶೋಕ್, ಡಿ.ಕೆ.ಶಿವಕುಮಾರ್ ಗೆ ಬಿಜೆಪಿಯಿಂದ ಯಾರು ಕರೆದರು? ಯಾವಾಗ ಕರೆದರು? ಎಂದು ಪ್ರಶ್ನಿಸಿದ್ದಾರೆ. ಡಿಕೆಶಿ ಅವರನ್ನು ಬಿಜೆಪಿಯ ಯಾರು ಕರೆದರು ಬಹಿರಂಗಪಡಿಸಲಿ. ಇಷ್ಟುದಿನ ಸುಮ್ಮನಿದ್ದ ಡಿ.ಕೆ.ಶಿವಕುಮಾರ್ ಈಗ ಅಧಿಕಾರ ಹಸ್ತಾಂತರ ಚರ್ಚೆ ಸಂದರ್ಭದಲ್ಲಿ ಈ ಹೇಳಿಕೆ ನೀಡುತ್ತಿದ್ದಾರೆ. ಈ ಮೂಲಕ ಅವರು ಕಾಂಗ್ರೆಸ್ ಗೆ ಧಮ್ಕಿ ಹಾಕುತ್ತಿದ್ದಾರೆ.
ನವೆಂಬರ್ ಕ್ರಾಂತಿಯಾಗಲಿದೆ ಎಂಬುದಕ್ಕೆ ಇದೆಲ್ಲ ಬೆಳವಣಿಗೆಗಳು. ಅಧಿಕಾರ ಹಸ್ತಾಂತರ ಸಮಯ ಬರುತ್ತಿದ್ದಾಗ ಹೇಳಿಕೆ ನೀಡುತ್ತಿದ್ದಾರೆ, ಇದು ಪಕ್ಕಾ ಮೆಸೇಜ್. ಧಮ್ಕಿ ಇದು. ನಂಬೆರ್ ಕ್ರಾಂತಿ ಶುರುವಾಗುತ್ತೆ ಅಂತಾ ಈಗ ಹೇಳುತ್ತಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.