ಡಿ.ಕೆ. ಶಿವಕುಮಾರ್ ಕಲೆಕ್ಷನ್ ಗಿರಾಕಿ, ಖಾತಾ ಪರಿವರ್ತನೆ ಹೆಸರಲ್ಲಿ ಬಡವರ ರಕ್ತ ಹೀರಲು ಹುನ್ನಾರ: ಜೆಡಿಎಸ್ ಆರೋಪ

ಡಿಸಿಎಂ ಡಿ.ಕೆ. ಶಿವಕುಮಾರ್ ಕಲೆಕ್ಷನ್ ಗಿರಾಕಿ, ಖಾತಾ ಪರಿವರ್ತನೆ ಹೆಸರಲ್ಲಿ ಬಡವರ ರಕ್ತ ಹೀರಲು ಹುನ್ನಾರ ನಡೆಸಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.

ಈ ಕುರಿತು ಜೆಡಿಎಸ್ ನಿಂದ ಟ್ವೀಟ್ ಮಾಡಲಾಗಿದ್ದು, ಕಲೆಕ್ಷನ್ ಗಿರಾಕಿ ಡಿ.ಕೆ. ಶಿವಕುಮಾರ್ ಇನ್ನೊಮ್ಮೆ  ಕೇಳಿಸ್ಕೋಳ್ಳಿ. ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಯಾವುದೇ ವಿರೋಧ ಇಲ್ಲ. ನಮ್ಮ ವಿರೋಧ ಇರುವುದು ಬಿ ಖಾತಾ ಪರಿವರ್ತನೆ ಹೆಸರಲ್ಲಿ ಕಮಿಷನ್ ಕಾಂಗ್ರೆಸ್ ಸರ್ಕಾರ 4 ಲಕ್ಷ, 5 ಲಕ್ಷ ರೂ. ಎಂದು ಲಕ್ಷ ಲಕ್ಷ ರೂ. ವಸೂಲಿ ಮಾಡಿ ಬಡವರ ರಕ್ತ ಹೀರುತ್ತಿರುವುದಕ್ಕೆ ಎಂದು ತಿಳಿಸಿದೆ.

ಬಿ ಖಾತೆ‌‌ ಹೊಂದಿರುವ ಬಡವರು ಮನೆ ಕಟ್ಟಿದ ದಿನದಿಂದ ಸರ್ಕಾರಕ್ಕೆ ಟ್ಯಾಕ್ಸ್ ಕೂಡ ಪಾವತಿಸುತ್ತಾ ಬಂದಿದ್ದಾರೆ. ಅಂತವರಿಗೆ ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಮಾಡಲು ಲಕ್ಷಾಂತರ ರೂ. ಕೇಳಿದರೆ ಬಡವರು ಎಲ್ಲಿಂದ ಹಣ ತರುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಉಸ್ತುವಾರಿ ಮಂತ್ರಿಯಾಗಿ ಬೆಂಗಳೂರನ್ನು ವಸೂಲಿ ಕೇಂದ್ರ ಮಾಡಿಕೊಂಡಿರುವ ಡಿಕೆಶಿ, ನಿಮ್ಮ ವಸೂಲಿ, ಧಮ್ಕಿ ಕೆಲಸ ಬಿಟ್ಟು ಬೆಂಗಳೂರನ ಗುಂಡಿ ಮುಚ್ಚಿ, ಕಸದ ಸಮಸ್ಯೆ ಬಗೆಹರಿಸಿ. ಸಿಲಿಕಾನ್ ಸಿಟಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ. ಬಣ್ಣ ಬಣ್ಣದ ಬಟ್ಟೆ, ಕೂಲಿಂಗ್ ಗ್ಲಾಸ್ ಹಾಕಿ ಫೋಟೋ ಶೂಟ್, ರೀಲ್ಸ್ ಮಾಡಿದರೇ ಸಾಲದು, ಕೆಲಸವನ್ನೇ ಮಾಡದ ಬಾಯಿ ಮಾತಿನ ಶೂರ ಡಿಕೆಶಿ, “ಕೈಲಾಗದವರು ಮೈಪರಚಿ ಕೊಂಡಂತೆ ನಿಮ್ಮ ನಡೆ ನುಡಿ. ಆಚಾರ ವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read