ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಧರ್ಮಸ್ಥಳಕ್ಕೆ ನ್ಯಾಯ ಒದಗಿಸಿಕೊಡುತ್ತಿರುವುದು ನಾವು. ಅವರದ್ದು ಎರಡು ಗುಂಪುಗಳಿವೆ. ಅವರಿಂದಲೇ ಇದೆಲ್ಲಾ ಆಗುತ್ತಿರುವುದು ಎಂದು ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಆ ಬುರುಡೆ ಗಿರಾಕಿ ಯಾರು? ಅವರು ಯಾರು ಅಂತಾ ಬಿಜೆಪಿಯವರು ಹೇಳಿಕೊಳ್ಲೋಕೆ ಆಗುತ್ತಿಲ್ಲ. ಅವರೆಲ್ಲರೂ ಬಿಜೆಪಿಯವರು. ಧರ್ಮಸ್ಥಳಕ್ಕೆ ಅವಮಾನ, ಅನ್ಯಾಯವಾಗಿದೆ ಅಂದರೆ ಅದು ಬಿಜೆಪಿನಾಯಕರಿಂದ. ಅವರ ಸಂಘಟನೆಯಿಂದ ಎಂದು ಕಿಡಿಕಾರಿದರು.