ಬೆಂಗಳೂರು: ಬೆಂಗಳೂರಿಗೆ ಬಿಜೆಪಿಯ ಯಾವೊಬ್ಬ ಸಂಸದನೂ 10 ರೂಪಾಯಿ ಅನುದಾನವನ್ನು ತಂದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿಯ್ತ ಯಾವೊಬ್ಬ ಸಂಸದರೂ ಕರ್ನಾಟಕಕ್ಕಾಗಲಿ, ಬೆಂಗಳೂರಿಗಾಗಲಿ 10 ರೂಪಾಯಿ ಅನುದಾನವನ್ನೂ ತಂದಿಲ್ಲ. ಬಿಜೆಪಿ ಸಂಸದರಿಗೆ ನಾಚಿಕೆಯಾಗಬೇಕು ಎಂದರು.
ಇಂದು ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಮೆಟ್ರೋ ಉದ್ಘಾಟನೆಯಾಗಲಿದೆ. ಹಳದಿ ಮಾರ್ಗಕ್ಕೆ ರಾಜ್ಯದ್ದೇ ಪಾಲು ಹೆಚ್ಚಿದೆ. ಶೇ.80ರಷ್ಟು ಅನುದಾನವನ್ನು ನಾವು ಕೊಟ್ಟಿದ್ದೇವೆ. ಬಿಜೆಪಿಯವರು ನಾವೇ ಮೆಟ್ರೋ ಮಾಡಿದ್ದೇವೆ ಎಂದು ಶೋ ಮಾಡ್ತಿದ್ದಾರೆ. ನಮ್ಮ ಮೆಟ್ರೋಗೆ ನಾವು ಶೇ.80ರಷ್ಟು ಅನುದಾನ ನೀಡಿದರೆ ಕೇಂದ್ರ ಸರ್ಕಾರ ಶೇ.20ರಷ್ಟು ಅನುದಾನ ನೀಡಿದೆ. ನಿಜವಾಗಿ ಅವರು ಶೇ.50ರಷ್ಟು ಅನುದಾನ ನೀಡಬೇಕಿತ್ತು ಎಂದರು.
ನರೇಗಾ ಹಣ ಒಂದೇ ಒಂದು ಪೈಸೆ ಹಣ ಕೊಟ್ಟಿಲ್ಲ. ಕೇಂದ್ರದಿಂದ ಅನುದಾನ ಯಾವುದೂ ಸಮರ್ಪಕವಾಗಿ ಬಂದಿಲ್ಲ. ನಾನು ಇಲ್ಲಿ ರಾಜಕೀಯ ಮಾಡುತ್ತಿಲ್ಲ. ಆದರೆ ಬಿಜೆಪಿ ನಾಯಕರು ಹೆಸರಿಗಷ್ಟೆ ನಾಯಕಾರಿಗಿದ್ದಾರೆ ರಾಜ್ಯಕ್ಕಾಗಿ ಯಾವುದೇ ಅನುಕೂಲವನ್ನೂ ಮಾಡುತ್ತಿಲ್ಲ ಎಂದು ಕಿಡಿಕಾರಿದರು.