ಬೆಂಗಳೂರು: ನಾನು ಸತ್ಯ ಹೇಳಿದರೆ ಕೆಲವರು ಸಹಿಸಲ್ಲ. ನಾನು ಏನೇ ಮಾತನಾಡಿದರೂ ಅದಕ್ಕೊಂದು ತಪ್ಪು ಹುಡುಕುವುದೇ ಕೆಲವರ ಕೆಲಸವಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ,ಕೆ.ಶಿವಕುಮಾರ್, ನಾನು ಸದನವಿರಲಿ ಎಲ್ಲಿಯೇ ಇರಲಿ ಏನೇ ಮಾತನಾಡಿದರೂ ಅದರಲ್ಲಿ ಕೇವಲ ತಪ್ಪು ಕಂಡು ಹಿಡಿಯುವುದೇ ಬೇರೆಯವರ ಕೆಲಸವಾಗಿದೆ. ರಾಜಕೀಯದವರಿರಬಹುದು, ಮಾಧ್ಯಮದವರಿರಬಹುದು, ಪ್ರಮೋದಾ ದೇವಿ ಆರು, ಸಂಸದ ಯಧುವೀರ್ ಅವರು, ವಿಧಾನಸಭೆ ಹೀಗೆ ಎಲ್ಲರೂ ನನ್ನ ಮಾತಿನಲ್ಲಿ ತಪ್ಪು ಹುಡುಕುವವರೇ. ಹೀಗಾಗಿ ನಾನು ಮಾತನಾಡದಿರುವುದೇ ಉತ್ತಮ ಎಂದು ಹೇಳಿದರು.
ಪ್ರತಿಕ್ರಿಯೆ ನೀಡಲು ಬೇರೆ ನಾಯಕರಿದ್ದಾರೆ, ಪಕ್ಷದ ವಕ್ತಾರರಿದ್ದಾರೆ. ಅವರ ಬಳಿ ಕೇಳಿ ಎಂದು ಹೇಳಿದರು.
You Might Also Like
TAGGED:ಡಿ.ಕೆ.ಶಿವಕುಮಾರ್