ತೀವ್ರ ಸ್ವರೂಪದೊಂದಿಗೆ ಭಾನುವಾರ ಅಪ್ಪಳಿಸಲಿದೆ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗ್ತಿರುವ ‘ರೆಮಲ್’ ಚಂಡಮಾರುತ

ಕೊಲ್ಕತ್ತ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗುತ್ತಿದ್ದು, ಮೇ 26ರ ಭಾನುವಾರದ ವೇಳೆಗೆ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ.

ಪಶ್ಚಿಮ ಬಂಗಾಳ ಕರಾವಳಿ ಮತ್ತು ಬಾಂಗ್ಲಾದೇಶ ಕರಾವಳಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರಸಕ್ತ ಮುಂಗಾರು ಪೂರ್ವದಲ್ಲಿ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಮೊದಲ ಚಂಡಮಾರುತ ಇದಾಗಿದೆ. ಇದಕ್ಕೆ ರೆಮಲ್ ಎಂದು ಹೆಸರಿಡಲಾಗಿದೆ.

ಪಶ್ಚಿಮ-ಮಧ್ಯ ಮತ್ತು ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ತೀವ್ರಗೊಂಡು ಭಾನುವಾರ (ಮೇ 26) ಸಂಜೆಯ ವೇಳೆಗೆ ತೀವ್ರ ಚಂಡಮಾರುತವಾಗಿ ಬಾಂಗ್ಲಾದೇಶ ಮತ್ತು ಪಕ್ಕದ ಪಶ್ಚಿಮ ಬಂಗಾಳ ಕರಾವಳಿಯನ್ನು ತಲುಪುತ್ತದೆ.

ಭಾರತೀಯ ಹವಾಮಾನ ಇಲಾಖೆ(ಐಎಂಡಿ) ವಿಜ್ಞಾನಿ ಮೋನಿಕಾ ಶರ್ಮಾ ಅವರು, ಈ ವ್ಯವಸ್ಥೆಯು ಶುಕ್ರವಾರ ಬೆಳಿಗ್ಗೆ ಕೇಂದ್ರ ಬಂಗಾಳ ಕೊಲ್ಲಿಯಲ್ಲಿ ಕೇಂದ್ರೀಕರಿಸಿದ್ದು, ಇದು ಶನಿವಾರ ಬೆಳಿಗ್ಗೆ ಚಂಡಮಾರುತವಾಗಿ ಮತ್ತಷ್ಟು ತೀವ್ರಗೊಳ್ಳುತ್ತದೆ. ಭಾನುವಾರ ಸಂಜೆಯ ವೇಳೆಗೆ ತೀವ್ರ ಚಂಡಮಾರುತವಾಗಿ ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳ ಕರಾವಳಿಯನ್ನು ತಲುಪುತ್ತದೆ ಎಂದು ತಿಳಿಸಿದ್ದಾರೆ.

ಚಂಡಮಾರುತವು ಭಾನುವಾರ ಗಂಟೆಗೆ 102 ಕಿಲೋಮೀಟರ್ ವೇಗವನ್ನು ತಲುಪಬಹುದು ಎಂದು IMD ಮುನ್ಸೂಚನೆ ನೀಡಿದೆ. ಮೇ 24 ಶುಕ್ರವಾರದವರೆಗೆ ದಕ್ಷಿಣ ಬಂಗಾಳ ಕೊಲ್ಲಿಗೆ, ಮೇ 26 ಭಾನುವಾರದವರೆಗೆ ಮಧ್ಯ ಬಂಗಾಳಕೊಲ್ಲಿ ಮತ್ತು ಮೇ 24 ರಿಂದ ಮೇ 27 ರ ಸೋಮವಾರದವರೆಗೆ ಉತ್ತರ ಬಂಗಾಳ ಕೊಲ್ಲಿಗೆ ಮೀನುಗಾರಿಕೆಗೆ  ತೆರಳದಂತೆ ಹವಾಮಾನ ಇಲಾಖೆ ಸೂಚಿಸಿದೆ.

ಮೇ 26-27 ರಂದು ಪಶ್ಚಿಮ ಬಂಗಾಳ, ಉತ್ತರ ಒಡಿಶಾ, ಮಿಜೋರಾಂ, ತ್ರಿಪುರಾ ಮತ್ತು ದಕ್ಷಿಣ ಮಣಿಪುರದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು IMD ಮುನ್ಸೂಚನೆ ನೀಡಿದೆ.

ಉತ್ತರ 24 ಪರಗಣಗಳು, ದಕ್ಷಿಣ 24 ಪರಗಣಗಳು ಮತ್ತು ಪುರ್ಬಾ ಮೇದಿನಿಪುರದ ಕರಾವಳಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯೊಂದಿಗೆ ಪಶ್ಚಿಮ ಬಂಗಾಳದ ಹಲವು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read