ದಿತ್ವಾ’ ಚಂಡಮಾರುತ ಶ್ರೀಲಂಕಾದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಧಾರಾಕಾರ ಮಳೆ, ರಣ ಭೀಕರ ಪ್ರವಾಹದಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ಚಂಡಮಾರುತದ ಅಬ್ಬರಕ್ಕೆ ಭಾರಿ ಪ್ರವಾಹ ಉಂಟಾಗಿದ್ದು334 ಜನರು ಮೃತಪಟ್ಟಿದ್ದಾರೆ. ಹಲವರು ಜನರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕಲನಿ ನದಿಯಲ್ಲಿ ನೀರಿನ ಮಟ್ಟ ಭಾರಿ ಏರಿಕೆಯಾಗುತ್ತಿದ್ದು, ಶ್ರೀಲಂಕಾ ರಾಜಧಾನಿ ಕೊಲಂಬೊದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ರಸ್ತೆಗಳು, ಮನೆಗಳು, ಕಟ್ಟಡಗಳು ಜಲಾವೃತಗೊಂಡಿದ್ದು, ಜನರು ಪರದಾಡುತ್ತಿದ್ದಾರೆ.
ದಿತ್ವಾ ಚಂಡಮಾರುತ ಶ್ರೀಲಂಕಾ ಕರಾವಳಿಯಿಂದ ದೂರ ಸರಿದಿದೆಯಾದರೂ ಕಳೆದ ಒಂದು ವಾರದಿಂದ ಸುರುಯುತ್ತಿರುವ ಧಾರಾಕಾರ ಮಳೆ, ಪ್ರವಾಹದಿಂದಾಗಿ ಜನರ ಬದುಕುಮೂರಾಬಟ್ಟೆಯಾಗಿದೆ. ಚಂಡಮಾರುತ ಪರಿಣಾಮ ಅಧ್ಯಕ್ಷ ಅನುರ ಕುಮಾರ ದಿಸ್ಸನಾಯಕೆ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಅಂತರಾಷ್ಟ್ರೀಯ ಸಮುದಾಯಗಳ ನೆರವು ಕೋರಿದ್ದಾರೆ.
ದೇಶಾದ್ಯಂತ 20 ಸಾವಿರಕ್ಕೂ ಹೆಚ್ಚು ಮನೆಗಳು ಹಾನಿಯಾಗಿವೆ. 7.8 ಲಕ್ಷಕ್ಕೂ ಅಧಿಕ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಜನರು ಆಶ್ರಯ ತಾಣಗಳಿಗೆ ಸ್ಥಳಾಂತರಗೊಂಡಿದ್ದಾರೆ. ಮೂಲಸೌಕರ್ಯ ಸಂಪೂರ್ಣ ಹಾನಿಯಾಗಿದೆ. 2017ರ ಬಳಿಕ ಶ್ರೀಲಂಕಾದಲ್ಲಿ ತಲೆದೂರಿರುವ ಅತಿದೊಡ್ಡ ನೈಸರ್ಗಿಕ ವಿಪತ್ತು ಇದಾಗಿದೆ.
A bus travelling along the Monaragala-Colombo main road was caught in the flash flood, and 23 passengers were rescued unharmed.
— Sri Lanka Tweet 🇱🇰 (@SriLankaTweet) November 27, 2025
The Monaragala-Colombo main road is inundated at Kumbukkana, blocking traffic. -Hiru pic.twitter.com/ih1CCgfN6L
