ಬೆಂಗಳೂರು: ಪಂಚಾಯತ್ ರಾಜ್ ಇಲಾಖೆಯ ಹಿರಿಯ ಸಹಾಯಕಿಗೆ ಸೈಬರ್ ವಂಚಕರು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪಂಚಾಯತ್ ರಾಜ್ ಇಲಾಖೆಯ ಹಿರಿಯ ಸಹಾಯಕಿ ಹೇಮಲತಾ ಎಂಬುವವರಿಗೆ ಸೈಬರ್ ವಂಚಕರು ವಾಟ್ಸಪ್ ಸಂದೇಶವನ್ನು ಕಳುಹಿಸಿ 45,000 ರೂಪಾಯಿ ದೋಚಿದ್ದಾರೆ. ಅಧೀನಕಾರ್ಯದರ್ಶಿ ಅವರ ವಾಟ್ಸಪ್ ನಿಂದ 45,000 ರೂ ಅವಶ್ಯಕತೆ ಇದೆ ಎಂದು ಹೇಮಲತಾ ಅವರಿಗೆ ಸಂದೇಶ ಬಂದಿತ್ತು. ತಕ್ಷಣ ಹೇಮಲತಾ ಗೂಗಲ್ ಪೇ ಮೂಲಕ ಹಣ ಕಳುಹಿಸಿದ್ದರು.
ಕರೆ ಮಾಡಿ ವಿಚಾರಿಸಿದಾಗ ಮೊಬೈಲ್ ನಂಬರ್ ಹ್ಯಾಕ್ ಆಗಿರುವುದು ತಿಳಿದುಬಂದಿದೆ. ಈ ಬಗ್ಗೆ ಸೋನುಕುಮಾರ್ ಎಂಬುವವರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ವಂಚನೆ ಕೇಸ್ ದಾಖಲಿಸಲಾಗಿದೆ.
TAGGED:ಸೈಬರ್ ವಂಚನೆ
