ಐಪಿಎಲ್ ಫೈನಲ್ ಪಂದ್ಯ ನೋಡಲು ರೈಲ್ವೆ ನಿಲ್ದಾಣದಲ್ಲೇ ಮಲಗಿದ ಸಿ ಎಸ್ ಕೆ ಫ್ಯಾನ್ಸ್

ಐಪಿಎಲ್ ಫೈನಲ್ ಪಂದ್ಯಕ್ಕಾಗಿ ಕಾತರದಿಂದ ಕಾಯ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಭಾನುವಾರ ಮಳೆ ತಣ್ಣೀರೆರಚಿತ್ತು. ತೀವ್ರ ಮಳೆಯಿಂದಾಗಿ ಸೋಮವಾರಕ್ಕೆ ಪಂದ್ಯ ಮುಂದೂಡಿಕೆಯಾಗಿದ್ದು ಇಂದು ಅಭಿಮಾನಿಗಳು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ವಿರುದ್ಧದ ಹೋರಾಟವನ್ನ ಕಣ್ತುಂಬಿಕೊಳ್ಳಲು ಸಿದ್ಧರಾಗಿದ್ದಾರೆ.

ಆದರೆ ಭಾನುವಾರ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂಗೆ ಆಗಮಿಸಿದ್ದ ಸಾವಿರಾರು ಅಭಿಮಾನಿಗಳು ಒಂದೇ ಒಂದು ಎಸೆತವನ್ನು ನೋಡದೆ ಮನೆಗೆ ಮರಳಬೇಕಾಯಿತು. ಈ ವೇಳೆ ಕೆಲವು ಅಭಿಮಾನಿಗಳು ಮನೆಗೆ ತೆರಳದೇ ರೈಲ್ವೆ ನಿಲ್ದಾಣಗಳಲ್ಲೇ ನಿದ್ರೆಗೆ ಮೊರೆಹೋಗಿದ್ದರು. ಮರುದಿನ ಪಂದ್ಯ ನೋಡಲು ಮತ್ತೆ ಊರಿಂದ ಬರುವ ಬದಲಾಗಿ ನಗರದಲ್ಲೇ ಉಳಿದು ಜಾಗ ಸಿಕ್ಕ ಕಡೆ ಮಲಗಿದ್ದಾರೆ. ಅದರಲ್ಲೂ ಸಿ ಎಸ್ ಕೆ ಅಭಿಮಾನಿಗಳು ಹಳದಿ ಜರ್ಸಿ ಧರಿಸಿ ರೈಲ್ವೆ ನಿಲ್ದಾಣಗಳಲ್ಲಿ ಆಶ್ರಯ ಪಡೆದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರದ ಪಂದ್ಯ ವೀಕ್ಷಣೆಗೆ ಹಿಂದಿನ ದಿನ ಪಡೆದಿದ್ದ ಟಿಕೆಟ್‌ಗಳನ್ನು ಬಳಸಲು ಅಭಿಮಾನಿಗಳಿಗೆ ಅವಕಾಶ ನೀಡಿದ್ದರೂ, ಮರುದಿನ ಫೈನಲ್‌ಗೆ ಹಿಂತಿರುಗಬೇಕಾಗಿರುವುದರಿಂದ ಹಲವಾರು ಅಭಿಮಾನಿಗಳು ಮನೆಗೆ ಮರಳುವ ಬದಲು ನಗರದಲ್ಲೇ ಉಳಿದರು.
CSK ಜೆರ್ಸಿ ಧರಿಸಿ ಬಂದಿರುವ ಅಭಿಮಾನಿಗಳು ಧೋನಿ ನೋಡಲು ಕಾತರರಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read