ಸೋಮವಾರ ರಾತ್ರಿ ಜರುಗಿದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವಿನ ಐಪಿಎಲ್ ಫೈನಲ್ ಪಂದ್ಯವನ್ನು ಇಡೀ ದೇಶವೇ ಕಾತರದಿಂದ ವೀಕ್ಷಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್, ಅದರಲ್ಲೂ ಧೋನಿ ಅಭಿಮಾನಿಗಳಿಗೆ ಈ ಪಂದ್ಯ ಬಹಳ ಭಾವನಾತ್ಮಕವಾಗಿತ್ತು. ಮುಂದಿನ ಐಪಿಎಲ್ ಋತುವಿನಲ್ಲಿ ತಮ್ಮ ಫೇವರಿಟ್ ಆಟಗಾರ ಮತ್ತೆ ಕಣದಲ್ಲಿ ಕಾಣುವರೋ ಇಲ್ಲವೋ ಎಂಬ ಕಾತರದಲ್ಲಿ ಈ ಬಾರಿ ಐಪಿಎಲ್ ಅನ್ನು ಧೋನಿ ಸಾರಥ್ಯದ ತಂಡವೇ ಗೆಲ್ಲಲಿ ಎಂದು ಬಯಸಿದ್ದವರೇ ಹೆಚ್ಚು.
ಅಹಮದಾಬಾದ್‌ನಲ್ಲಿ ನಡೆದ ಪಂದ್ಯದ ವೇಳೆ ಪೆವಿಲಿಯನ್‌ನಲ್ಲಿದ್ದ ಬಾಲಕಿಯೊಬ್ಬಳು ಚೆನ್ನೈ ತಂಡದ ಜೆರ್ಸಿ ಧರಿಸಿ ಧೋನಿಯ ತಂಡಕ್ಕೆ ಬೆಂಬಲ ನೀಡುತ್ತಿದ್ದ ವೇಳೆ ಭಾವುಕಳಾಗಿ ಕಣ್ಣೀರಿಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಮಳೆಯ ಕಾರಣ 15 ಓವರ್‌ಗಳಲ್ಲಿ 171ರನ್‌ಗಳ ಪರಿಷ್ಕೃತ ಗುರಿ ಬೆನ್ನತ್ತಿದ್ದ ಚೆನ್ನೈ ಕಡೆಯ ಎಸೆತದವರೆಗೂ ರೋಚಕ ಆಟವಾಡಿ ಪಂದ್ಯದಲ್ಲಿ ಜಯಶಾಲಿಯಾಗಿದೆ.
ಧೋನಿ ತಂಡ ಟ್ರೋಫಿ ಎತ್ತಿ ಹಿಡಿಯುವ ಕೆಲವೇ ಕ್ಷಣಗಳ ಮುಂಚೆ ಈ ಬಾಲಕಿ ಕಣ್ಣೀರು ಹಾಕಿ ಭಾವುಕಳಾದ ವಿಡಿಯೋ ವೈರಲ್ ಆಗಿದೆ. ಧೋನಿ ಈ ಬಾಲಕಿಗಾಗಿ ಕೆಲ ಕ್ಷಣಗಳನ್ನಾದರೂ ಬಿಡುವು ಮಾಡಿಕೊಂಡು ಆಕೆಯನ್ನು ಭೇಟಿ ಮಾಡಬೇಕೆಂದು ನೆಟ್ಟಿಗರು ವಿನಂತಿಸಿಕೊಂಡಿದ್ದಾರೆ.
https://twitter.com/garam_mizaaj/status/1663276852159578112?ref_src=twsrc%5Etfw%7Ctwcamp%5Etweetembed%7Ctwterm%5E1663276852159578112%7Ctwgr%5Eb1e16e8f52dbf5a6a1c1a241f52433e6b46e8c6f%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fcsk-fan-bursts-into-tears-during-ipl-2023-final-twitter-pleads-dhoni-to-meet-her-after-video-goes-viral-2386446-2023-05-30
https://twitter.com/garam_mizaaj/status/1663276852159578112?ref_src=twsrc%5Etfw%7Ctwcamp%5Etweetembed%7Ct
https://twitter.com/Kartik094516651/status/1663299715948244993?ref_src=twsrc%5Etfw%7Ctwcamp%5Etweetembed%7Ctwterm