ರಾಜ್ಯದಲ್ಲಿ BNSS ಅಡಿ ದಾಖಲಾದ ಮೊದಲ ಕೇಸ್ ರದ್ದು: ಹೈಕೋರ್ಟ್ ಆದೇಶ

ಬೆಂಗಳೂರು: ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ- 2023(ಬಿಎನ್ಎಸ್ಎಸ್) ಜಾರಿಗೆ ಬಂದ 2024 ರ ಜುಲೈ 1 ರಂದೇ ಅತ್ಯಾಚಾರ ಮತ್ತು ಲೈಂಗಿಕ ಶೋಷಣೆ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಹಿಂದಿನ ಅಪರಾಧ ಪ್ರಕ್ರಿಯ ಸಂಹಿತೆ- ಸಿಆರ್ಪಿಸಿ ಅಡಿಯಲ್ಲಿ ದಾಖಲಿಸಿದ ಕೇಸ್ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.

ರಾಯಚೂರು ಜಿಲ್ಲೆ ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ 2024ರ ಜುಲೈ 1ರಂದು ತಮ್ಮ ವಿರುದ್ಧ ಅತ್ಯಾಚಾರ, ಜೀವ ಬೆದರಿಕೆ, ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ಐಆರ್ ಮತ್ತು ಆ ಕುರಿತು ಸ್ಥಳೀಯ ಜೆಎಂಎಫ್ಸಿ ಕೋರ್ಟ್ ವಿಚಾರಣೆ ರದ್ದುಪಡಿಸುವಂತೆ ಕೋರಿ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ಅರುಣ್ ಕುಮಾರ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಅವರ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಆರ್. ನಟರಾಜನ್ ಅವರ ಪೀಠ ಸಿಆರ್ಪಿಸಿ ಬದಲಾಗಿ ಬಿಎನ್ಎಸ್ಎಸ್ ಜುಲೈ 1ರಂದು ಜಾರಿಗೆ ಬಂದಿದೆ. ಅಂದೇ ಅರ್ಜಿದಾರರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಆದರೆ ಹಿಂದಿನ ಸಿಆರ್ಪಿಸಿ ಸೆಕ್ಷನ್ 154 ಆಡಿ ದೂರುದಾರರ ಹೇಳಿಕೆ ದಾಖಲಿಸಿಕೊಂಡು ಅದರ ಮೇಲೆ ಎಫ್ಐಆರ್ ದಾಖಲಾಗಿದೆ. ಬಿಎನ್ಎಸ್ಎಸ್ ಜಾರಿಗೆ ಬಂದ ನಂತರವೂ ಹಿಂದಿನ ಸಿಆರ್ಪಿಸಿ ಅಡಿ ಎಫ್ಐಆರ್ ದಾಖಲಿಸಿರುವುದನ್ನು ಅನುಮತಿಸಲಾಗದು. ಅದರಂತೆಯೇ ಅರ್ಜಿದಾರರ ವಿರುದ್ಧ ಎಫ್ಐಆರ್ ರದ್ದುಪಡಿಸಲಾಗುತ್ತಿದೆ ಎಂದು ಹೈಕೋರ್ಟ್ ಪೀಠ ಆದೇಶ ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read