Viral Video: 3.13 ಸೆಕೆಂಡ್‌ಗಳಲ್ಲಿ ರೂಬಿಕ್ ಕ್ಯೂಬ್ ಒಗಟು ಬಿಡಿಸಿ ಗಿನ್ನೆಸ್ ದಾಖಲೆ ನಿರ್ಮಿಸಿದ ಮ್ಯಾಕ್ಸ್ ಪಾರ್ಕ್

ಅತ್ಯಂತ ಕಡಿಮೆ ಸಮಯದಲ್ಲಿ ರೂಬಿಕ್ ಕ್ಯೂಬ್ ಒಗಟನ್ನು ಬಿಡಿಸಿದ ಪಜ಼ಲ್ ತಜ್ಞ ಮ್ಯಾಕ್ಸ್‌ ಪಾರ್ಕ್ ನೂತನ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ.

21 ವರ್ಷದ ಈ ಚತುರ ಕೇವಲ 3.13 ಸೆಕೆಂಡ್‌ಗಳಲ್ಲಿ ಈ ದಾಖಲೆ ಮಾಡುವ ಮೂಲಕ ಈ ಹಿಂದೆ ಚೀನಾದ ಯುಶೆಂಗ್‌ ಡು ನಿರ್ಮಿಸಿದ್ದ 3.4 ಸೆಕೆಂಡ್‌ಗಳ ದಾಖಲೆ ಮುರಿದಿದ್ದಾರೆ.

ಕ್ಯಾಲಿಫೋರ್ನಿಯಾದ ಲಾಂಗ್ ಬೀಚ್‌ನಲ್ಲಿ ಜೂನ್ 11ರಂದು ಆಯೋಜಿಸಲಾಗಿದ್ದ ವಿಶೇಷ ಕೂಟವೊಂದರಲ್ಲಿ ಮ್ಯಾಕ್ಸ್‌ ಈ ದಾಖಲೆ ನಿರ್ಮಿಸಿದ್ದಾರೆ.

ಇದಕ್ಕೂ ಮುನ್ನ 3.63 ಸೆಕೆಂಡ್‌ಗಳಲ್ಲಿ ರೂಬಿಕ್ ಕ್ಯೂಬ್ ಒಗಟನ್ನು ಬಿಡಿಸಿದ್ದ ಮ್ಯಾಕ್ಸ್, ಬರುಬರುತ್ತಾ ತಮ್ಮ ಮೊನಚನ್ನು ಇನ್ನಷ್ಟು ತೀವ್ರಗೊಳಿಸಿದ್ದು, ಇದೀಗ ಈ ವಿನೂತನ ದಾಖಲೆಗೆ ಭಾಜನರಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read