Video: ಪಿಕ್‌ನಿಕ್‌ ಬಂದಿದ್ದವರ ಬಿಯರ್‌ ಬಾಕ್ಸ್ ಕೊಂಡೊಯ್ದ ಮೊಸಳೆ

ಪಿಕ್‌ನಿಕ್ ಮೋಜಿನಲ್ಲಿದ್ದ ಪ್ರವಾಸಿಗಳಿಗೆ ಸ್ವಲ್ಪ ಕಾಟ ಕೊಡಲೆಂದು ಮೊಸಳೆಯೊಂದು ನೀರಿನಿಂದ ಮೇಲೆದ್ದು ಬಂದು ಚೇಷ್ಟೆ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಬ್ಯೂಟಿಫುಲ್ ಸೈಟಿಂಗ್ಸ್ ಹೆಸರಿನ ಫೇಸ್ಬುಕ್ ಪೇಜ್ ಒಂದರಲ್ಲಿ ಶೇರ್‌ ಮಾಡಲಾದ ಈ ವಿಡಿಯೋಗೆ 1.5 ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಸಿಕ್ಕಿವೆ.

ಕೂಲರ್‌ ಡಬ್ಬ ಹಾಗೂ ಊಟ ಇಟ್ಟಿದ್ದ ಜಾಗದ ಪಕ್ಕದಲ್ಲೇ ಮೊಸಳೆ ನಿದ್ರೆ ಮಾಡುತ್ತಿರುವುದರಿಂದ ವಿಡಿಯೋ ಆರಂಭವಾಗುತ್ತದೆ. ‌

ಈ ತುಣುಕು ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ, “ಮೊಸಳೆಯೇ ನೀರಿಗೆ ವಾಪಸ್ ಹೋಗು, ಇದು ಕ್ರಿಕೆಟ್ ಆಡಿದಂತಲ್ಲ,” ಎನ್ನುತ್ತಿರುವುದನ್ನು ಕೇಳಬಹುದಾಗಿದೆ. “ನಾವು ಪಿಕ್‌ನಿಕ್ ಎಂಜಾಯ್ ಮಾಡುತ್ತಿರುವಾಗಲೇ ಈ ಮೊಸಳೆ ನೀರಿನಿಂದ ಮೇಲೆದ್ದು ಬಂದಿದೆ,” ಎಂದು ಈತ ಹೇಳುತ್ತಾನೆ.

ಬಿಸಿಲಿಗೆ ಮೈಯೊಡ್ಡಿಕೊಂಡು ಮೊಸಳೆ ಹಾಯಾಗಿ ಮಲಗಿದ್ದರೆ ಪ್ರವಾಸಿಗರು ಭಯದಿಂದ ಜೀಪ್‌ನಲ್ಲೇ ಉಳಿಯುತ್ತಾರೆ.

ನೋಡ ನೋಡುತ್ತಲೇ ಬಿಯರ್‌ ಇದ್ದ ಕೂಲರ್‌ ಪೆಟ್ಟಿಗೆಯನ್ನು ಮೊಸಳೆ ನೀರಿಗೆ ಎಳೆದೊಯ್ದುಬಿಡುತ್ತದೆ. ಅಲ್ಲದೇ ಅಲ್ಲಿಟ್ಟಿದ್ದ ವೈನ್ ಬಾಟಲಿಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡುತ್ತದೆ. ಇದೇ ವೇಳೆ ನೀರಿನಿಂದ ಹೊರಬರುವ ಮತ್ತೊಂದು ಮೊಸಳೆ ಬಿಯರ್‌ ಬಾಕ್ಸ್‌ಗಾಗಿ ಮೊದಲು ಬಂದಿದ್ದ ಮೊಸಳೆಯೊಂದಿಗೆ ಕಾದಾಟಕ್ಕೆ ಮುಂದಾಗುತ್ತದೆ. ಈ ವಿಡಿಯೋಗೆ ಭಾರೀ ಫನ್ನಿ ಕಾಮೆಂಟ್‌ಗಳು ಬಂದಿವೆ.

https://www.youtube.com/watch?v=PPC2hXs0fXo&feature=youtu.be

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read