ಲೋಕಸಭೆ ಚುನಾವಣೆಯಲ್ಲಿ (Lok Sabha elections) ಬಿಜೆಪಿ-ಜೆಡಿಎಸ್ ಮೈತ್ರಿ(BJP-JD(S) alliance) ವಿಚಾರದ ಬಗ್ಗೆ ಬಿಜೆಪಿ ಎಂಎಲ್ ಸಿ ಸಿ.ಪಿ. ಯೋಗೇಶ್ವರ್(BJP MLC C.P. Yogeshwar) ಮಹತ್ವದ ಹೇಳಿಕೆ ನೀಡಿದ್ದು, ಮೈತ್ರಿ ವಿಚಾರದ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆ ಎಂದಿದ್ದಾರೆ.
ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಲೋಕಸಭೆ ಚುಣಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ನಾನು ಮಾತನಾಡುವುದಿಲ್ಲ. ನಮ್ಮ ಪಕ್ಷ ತೀರ್ಮಾನ ಕೈಗೊಳ್ಳುತ್ತದೆ. ವಿಧಾನಸಭೆ ಚುನಾವಣೆಯಲ್ಲಿ ಹೊಂದಾಣಿಕೆ ಎಂಬುದು ಮುಗಿದಕಥೆ. ಹೊಂದಾಣಿ ಬಗ್ಗೆನಾನು ಮಾತನಾಡಿದ್ರೆ ಬೆಂಕಿ ಹಚ್ಚಿದಂತಾಗುತ್ತದೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಹಿರಿಯ ನಾಯಕರು ಹೊಂದಾಣಿಕೆ ಮಾಡಿಕೊಂಡಿರುವುದು ನಿಜ. ನನಗೂ ವೈಯಕ್ತಿವಾಗಿ ನಿಜ ಅನಿಸಿದೆ. ಮಂತ್ರಿಮಂಡಲ ವಿಸ್ತರಣೆ ಮಾಡದಿರುವುದ ಬಿಜೆಪಿ ಸೋಲಿಗೆ ಕಾರಣ. ಕಾಂಗ್ರೆಸ್ ಸುಳ್ಳು ಆರೋಪಗಳಿಗೆ ಟಕ್ಕರ್ ಕೊಡಲು ಆಗಲಿಲ್ಲ. ಜೆಡಿಎಸ್, ಬಿಜೆಪಿ ಹೋರಾಟದಿಂದ 3 ನೇಯವರಿಗೆ ಲಾಭವಾಗಿದೆ ಎಂದು ಹೇಳಿದರು.
You Might Also Like
TAGGED:CP Yogeshwar